Job Description: * ಇತ್ತೀಚಿಗೆ ಜಪಾನ್ನಲ್ಲಿ ಜರುಗಿದ ಸಂಸದೀಯ ಚುನಾವಣೆಯಲ್ಲಿ ಪ್ರಧಾನಿ ಫುಮಿಯೊ ಕಿಶಿಡಾ ಅವರ ನೇತೃತ್ವದ ಮೈತ್ರಿಕೂಟವು ಗೆಲುವು ದಾಖಲಿಸಿದೆ, ಇದೇ ಸಂಧರ್ಭದಲ್ಲಿ ಪ್ರಧಾನಿ ಫುಮಿಯೊ ಕಿಶಿಡಾ ಅವರು ಕೋವಿಡ್-19 ಯಿಂದಾಗಿ ಚೇತರಿಸಿಕೊಳ್ಳಲು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು. * ಪ್ರಧಾನಿ ಫುಮಿಯೊ ಕಿಶಿಡಾ ಅವರು ಇತ್ತೀಚಿಗಷ್ಟೇ ಜಪಾನ್ನ ಪ್ರಧಾನಿಯಾಗಿ ಸ್ವೀಕರಿಸಿದ್ದರು. * ಪ್ರಸ್ತುತ ಜಪಾನಿನ ಸಂಸತ್ತಿನ ಕೆಳಮನೆಯ 465 ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲಾಯಿತು ಅದರಲ್ಲಿ ಇದೀಗ ಅಧಿಕಾರದಲ್ಲಿರುವ ಲಿಬರಲ್ ಡೆಮೊಕ್ರಾಟಿಕ್ ಪಕ್ಷ ಹಾಗೂ ಮಿತ್ರಪಕ್ಷ ಕೊಮೈಟೊ 293 ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡು ಬಹುಮತ ಗಳಿಸಿದೆ ಎಂದು ಅಧಿಕೃತ ಘೋಷಣೆಯನ್ನು ಮಾಡಿದೆ, ಇದೇ ಚುನಾವಣೆಯಲ್ಲಿ ಎಲ್ಡಿಪಿ ಪಕ್ಷವು 261 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ತಿಳಿಸಲಾಗಿದೆ.