Job Description: * ರಾಷ್ಟ್ರೀಯ ಏಕತಾ ದಿನದ ಹಿನ್ನಲೆಯಿಂದಾಗಿ ಸಂಸ್ಕೃತಿ ಸಚಿವಾಲಯವು ದೇಶಭಕ್ತಿ ಗೀತ ಬರವಣಿಗೆ, ಲೋರಿ ಬರವಣಿಗೆ ಹಾಗೂ ರಂಗೋಲಿ ತಯಾರಿಕೆಗಾಗಿ 3 ರಾಷ್ಟ್ರವ್ಯಾಪಿ ಸ್ಪರ್ಧೆಗಳನ್ನು ಆರಂಭಿಸಿದೆ. * ತಹಶೀಲ್ ಮಟ್ಟ, ಹಾಗೂ ತಾಲೂಕಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸ್ಪರ್ಧೆಗಳು ನಡೆಯಲಿವೆ, ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಮನ್ ಕಿ ಬಾತ್ನಲ್ಲಿ ಈ ಸ್ಪರ್ಧೆಗಳನ್ನೂ ಘೋಷಣೆ ಮಾಡಿದರು. * ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಗಣ್ಯ ವ್ಯಕ್ತಿಗಳಿಂದ ಸಾರ್ವಜನಿಕ ಭಾಗವಹಿಸುವಿಕೆ ಪರಿಚಯಿಸಲಾಗುತ್ತಿದೆ, ಇತ್ತೀಚಿಗೆ ಲತಾ ಮಂಗೇಶ್ಕರ್ ಅವರು ದೇಶಭಕ್ತಿ ಗೀತ ಸ್ಪರ್ಧೆಗಾಗಿ ಟ್ವೀಟ್ ಮಾಡಿದ್ದಾರೆ, ಎ.ಆರ್. ರೆಹಮಾನ್ ಲೋರಿ ಅಥವಾ ಲಾಲಿ ಬರೆಯುವ ಸ್ಪರ್ಧೆಗೆ ಟ್ವೀಟ್ ಮಾಡಿದ್ದಾರೆ, ಸುದರ್ಶನ್ ಪಟ್ನಾಯಕ್ ಅವರು ರಂಗೋಲಿ ಸ್ಪರ್ಧೆಗಾಗಿ ಟ್ವೀಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. * ಆಜಾದಿ ಕಾ ಅಮೃತ ಮಹೋತ್ಸವ ಇದೊಂದು ಭಾರತ ಸರ್ಕಾರದ ಉಪಕ್ರಮವಾಗಿದೆ, 75 ವರ್ಷಗಳ ಭಾರತವನ್ನು ಸ್ಮರಿಸಲು ಇದನ್ನು ಆರಂಭಿಸಲಾಗಿದೆ.