Job Description: * ಪ್ರತಿ ವರ್ಷ ಅಕ್ಟೋಬರ್. 31 ರಂದು ರಾಷ್ಟ್ರೀಯ ಏಕತಾ ದಿವಸ್ ಅಥವಾ ದಿನವನ್ನು ಆಚರಣೆ ಮಾಡಲಾಗುತ್ತದೆ. * ಈ ಹಿಂದೆ 2014 ರಲ್ಲಿ ಭಾರತ ಸರ್ಕಾರವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನು ಪರಿಚಯಿಸಿದೆ, ಅಷ್ಟೇ ಅಲ್ಲದೇ ದೇಶವನ್ನು ಒಗ್ಗೂಡಿಸಲು ಇವರು ಪಟ್ಟಿರುವ ಪ್ರಯತ್ನಗಳನ್ನು ಗುರುತಿಸಲಾಗಿದೆ. * ಪ್ರಸ್ತುತ ರಾಷ್ಟ್ರೀಯ ಏಕತಾ ದಿನವನ್ನು ಭಾರತದ ಶಕ್ತಿಯ ಜ್ಞಾಪನೆಯಾಗಿ ಪರಿಗಣಿಸಲಾಗಿದೆ, ಹಾಗೂ ಭಾರತದ ಭದ್ರತೆ, ಏಕತೆ ಮತ್ತು ಸಮಗ್ರತೆಗೆ ಉಂಟಾಗುವ ಅಪಾಯಗಳ ಕಡೆಗೆ ಭಾರತದ ಸ್ಥಿತಿಸ್ಥಾಪಕತ್ವವನ್ನು ತೋರಿಸಲಿದೆ. * ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947-1950ರ ಅವಧಿಯಲ್ಲಿ ಭಾರತದ ಮೊದಲ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ, ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ನ ಹಿರಿಯ ನಾಯಕರಾಗಿ ಕೆಲಸ ನಿರ್ವಹಿಸಿದ್ದಾರೆ, ಅಷ್ಟೇ ಅಲ್ಲದೇ 1947 ರ ಭಾರತ-ಪಾಕಿಸ್ತಾನ ಯುದ್ಧದ ಸಂಧರ್ಭದಲ್ಲಿ ಇವರು ಕೇಂದ್ರ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. * ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ, ಇದು 182 ಮೀ. ಎತ್ತರವನ್ನು ಹೊಂದಿದೆ. * ಪ್ರಸ್ತುತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯು ಗುಜರಾತ್ ರಾಜ್ಯದ ಕವಾಡಿಯಾ ಕಾಲೋನಿಯಲ್ಲಿ ನರ್ಮದಾ ನದಿಯ ಮೇಲಿದೆ.