Job Description: * ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕ ನಟ ಹಾಗೂ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ್ಯ ಪುನೀತ್ ರಾಜ್ಕುಮಾರ್ ಅವರು ವಿಧಿವಶರಾಗಿದ್ದಾರೆ. * ಪುನೀತ್ ರಾಜ್ಕುಮಾರ್ ಅವರು 1975 ರ ಮಾರ್ಚ್. 17 ರಂದು ಜನಿಸಿದ್ದರು, ಇತ್ತೀಚಿಗೆ ಇವರು 2021 ರ ಅಕ್ಟೋಬರ್. 29 ರಂದು ಹೃದಯಘಾತದಿಂದ ನಿಧನರಾಗಿದ್ದಾರೆ, ಜನಪ್ರಿಯವಾಗಿ ಇವರನ್ನು ಅಪ್ಪು ಎಂದು ಕರೆಯುತ್ತಾರೆ, ಅಷ್ಟೇ ಅಲ್ಲದೇ ಮಾಧ್ಯಮಗಳು ಮತ್ತು ಅಭಿಮಾನಿಗಳು 'ಪವರ್ಸ್ಟಾರ್' ಎಂದು ಕರೆಯುತ್ತಾರೆ, ಇವರು ಭಾರತೀಯ ನಟ, ಹಿನ್ನೆಲೆ ಗಾಯಕ, ದೂರದರ್ಶನ ನಿರೂಪಕ ಹಾಗೂ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. * ಪುನೀತ್ ರಾಜ್ಕುಮಾರ್ ಅವರು ಒಟ್ಟು 29 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ, 1985 ರಲ್ಲಿ ಇವರು ಬಾಲ ನಟನಾಗಿ ಬೆಟ್ಟದ ಹೂವು ಎಂಬ ಚಿತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಇವರಿಗೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ, ಅಷ್ಟೇ ಅಲ್ಲದೇ ಚಳಿಸುವ ಮೋಡಗಳು ಹಾಗೂ ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯ ಕೂಡ ಲಭಿಸಿದೆ. * ಪುನೀತ್ ರಾಜಕುಮಾರ ಅವರು ಮೊದಲ ಬಾರಿ ನಾಯಕ ನಟನಾಗಿ 2002 ರಲ್ಲಿ ಅಪ್ಪು ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದರು. * ಮತ್ತೇ ಇವರು 2012 ರಲ್ಲಿ ಕನ್ನಡದ ಕೋಟ್ಯಾಧಿಪತಿ ಗೇಮ್ ಶೋನಲ್ಲಿ ದೂರದರ್ಶನ ನಿರೂಪಕರಾಗಿ ಕೆಲಸ ಮಾಡಿದ್ದಾರೆ, ಅದೇ 2012ರಲ್ಲಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸಿದ 'ಅಣ್ಣಾ ಬಾಂಡ್' ಎಂಬ ಚಿತ್ರದಲ್ಲಿನ ಅಭಿನಯಕ್ಕಾಗಿ ಇವರಿಗೆ ಸುವರ್ಣ ಅತ್ಯುತ್ತಮ ನಟ ಪ್ರಶಸ್ತಿಯ ಲಭಿಸಿತು, ಹಾಗೂ IIFA ಪ್ರಶಸ್ತಿಗೆ ಇವರು ನಾಮನಿರ್ದೇಶನಗೊಂಡರು. * ಪುನೀತ್ ರಾಜಕುಮಾರ ಅವರು ನಾಯಕ ನಟ ಅಷ್ಟೇ ಅಲ್ಲದೇ ಹಿನ್ನೆಲೆ ಗಾಯಕರು ಕೂಡ ಆಗಿದ್ದರು, ಪ್ರಸ್ತುತ ಇವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳಿಗೆ ಇವರು ಪಡೆಯುವ ಸಂಭಾವನೆಯು ದಾನಕ್ಕೆ ಹೋಗುತ್ತದೆ ಎಂದು ಸ್ವತಃ ಅವರೇ ತಿಳಿಸಿದ್ದರು. * ಪುನೀತ್ ರಾಜಕುಮಾರ ಅವರು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳು, LED ಬಲ್ಬ್(ದೀಪ) ಪ್ರಾಜೆಕ್ಟ್, 7-ಅಪ್, F-ಸ್ಕ್ವೇರ್, ಡಿಕ್ಸಿ ಸ್ಕಾಟ್, ಮಲಬಾರ್ ಗೋಲ್ಡ್'ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು, ಅಷ್ಟೇ ಅಲ್ಲದೇ ಪೋಥಿ ಸಿಲ್ಕ್ಸ್, ಫ್ಲಿಪ್ಕಾರ್ಟ್ ಮತ್ತು ಮಣಪ್ಪುರಂ, ಇಂಡಿಯನ್ ಪ್ರೀಮಿಯರ್ ಲೀಗ್(IPL) ಕ್ರಿಕೆಟ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ರಾಂಡ್ ಅಂಬಾಸಿಡರ್ ಆಗಿದ್ದರು, ಹಾಗೂ ಬೆಂಗಳೂರು ಪ್ರೀಮಿಯರ್ ಫುಟ್ಸಲ್ ತಂಡದ ಮಾಲೀಕರಾಗಿದ್ದರು. * ಪುನೀತ್ ಅವರು PRK ಆಡಿಯೊದ ಸ್ಥಾಪಕರು ಮತ್ತು ಮಾಲೀಕರಾಗಿದ್ದರು, ಇದೀಗ PRK ಆಡಿಯೊ 2021 ರ ಅಕ್ಟೋಬರ್ ಹೊತ್ತಿಗೆ 1.13 ಮಿಲಿಯನ್ ಚಂದಾದಾರರನ್ನು ಹೊಂದಿದೆ.