Job Description: * ಒಡಿಶಾದಲ್ಲಿ ಪ್ರತಿದಿನ ಸರಾಸರಿ 5.25 ಲಕ್ಷ ಟನ್ ಕಲ್ಲಿದ್ದಲನ್ನು ಪೂರೈಸುತ್ತಿದ್ದ ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ ಕಂಪನಿಯು 28-10-2021 ರಂದು ದಾಖಲೆಯ 6.04ಲಕ್ಷ ಟನ್ ಕಲ್ಲಿದ್ದಲನ್ನು ಗ್ರಾಹಕರಿಗೆ ರವಾನಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿರುವುದಕ್ಕಾಗಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಹಾಗೂ ರೈಲು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಹಾಯಕ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದನ್ವೆ ಅವರುಗಳು ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ ಕಂಪನಿಯ ಅಧ್ಯಕ್ಷ ಮತ್ತು ಕಾರ್ಯಕಾರಿ ನಿರ್ದೇಶಕರನ್ನು ಸನ್ಮಾನಿಸಿದರು. * ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ ಕಂಪನಿಯು ತೋರಿದ ಐತಿಹಾಸಿಕ ದಾಖಲೆಯಲ್ಲಿ ಕಲ್ಲಿದ್ದಲು ಗಣಿಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ರೈಲ್ವೆ, ಕಾರ್ಮಿಕ ಸಂಘದ ನಾಯಕರು ಮತ್ತು ಸ್ಥಳೀಯ ಎಲ್ಲ ಮಧ್ಯಸ್ಥಗಾರರ ಪ್ರಯತ್ನವನ್ನು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಶ್ಲಾಘಿಸಿದರು. * ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ (MCL)ನ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತಿರುವ ʻನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ʼನ (NCL) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಿನ್ಹಾ ಅವರನ್ನೂ ಸಹ ಸಚಿವರು ಶ್ಲಾಘಿಸಿದರು. * ಈ ಎರಡೂ ಅಂಗಸಂಸ್ಥೆಗಳು ಒಂದು ದಶಲಕ್ಷ ಟನ್ ಕಲ್ಲಿದ್ದಲು ರವಾನೆಯಲ್ಲಿ ದಾಖಲೆಯ ಗಡಿಯನ್ನು ದಾಟಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. * ದೇಶದಲ್ಲಿ ಇಂಧನ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ, ಶುಷ್ಕ ಇಂಧನಕ್ಕೆ ಬೇಡಿಕೆ ಹೆಚ್ಚುತ್ತಿದ್ದಾಗ ʻMCLʼ ಮತ್ತು ʻNCLʼ ಅತ್ಯಂತ ಕಠಿಣ ಸಮಯದಲ್ಲಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಕ್ಕಾಗಿ ಸಚಿವಾಲಯವು ಈ ಎರಡೂ ಕಂಪನಿಗಳ ಪ್ರಯತ್ನಗಳನ್ನು ಗುರುತಿಸಿ ʻMCLʼ ಮತ್ತು ʻNCLʼನ ಕಾರ್ಯಕಾರಿ ನಿರ್ದೇಶಕರಿಗೆ ಮೆಚ್ಚುಗೆ ಪತ್ರಗಳನ್ನು ನೀಡಿದೆ. * ಪ್ರಸಕ್ತ ಹಣಕಾಸು ವರ್ಷದಲ್ಲಿ, ʻMCLʼ ಗ್ರಾಹಕರಿಗೆ 95.7 ದಶಲಕ್ಷ ಟನ್ ಕಲ್ಲಿದ್ದಲನ್ನು ಪೂರೈಸಿದ್ದರಿಂದ ಕಳೆದ ವರ್ಷಕ್ಕಿಂತ ಸುಮಾರು 21% ಬೆಳವಣಿಗೆಯನ್ನು ಹೊಂದಿದೆ.