Job Description: * ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ ಹಾಗೂ ದೆಹಲಿಯ ಕುಶಾಗ್ರ ರಾವತ್ ಅವರು ದಾಖಲೆಯನ್ನು ಬರೆದಿದ್ದಾರೆ. * ಪ್ರಸ್ತುತ ಶ್ರೀಹರಿ ನಟರಾಜ್ ಅವರು ಪುರುಷರ 100 ಮೀ. ಬ್ಯಾಕ್ಸ್ಟ್ರೋಕ್ನ್ನು ಕೇವಲ 55.10 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಪಡೆದಿದ್ದಾರೆ, ಮತ್ತೆ ಎರಡನೇ ಸ್ಥಾನವನ್ನು ಕರ್ನಾಟಕದ ಆದ ಶಿವ ಎಸ್ ರವರು ಪಡೆದುಕೊಂಡಿದ್ದಾರೆ. * ಪ್ರಸ್ತುತ ಗೋವಾದ ಕ್ಷೇವಿಯರ್ ಮೈಕೆಲ್ ಡಿ'ಸೋಜಾ ಅವರು ಈ ವಿಭಾಗದ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ದೆಹಲಿಯ ಕುಶಾಗ್ರ ರಾವತ್ ಅವರು ಪುರುಷರ 400 ಮೀ. ಫ್ರೀಸ್ಟೈಲ್ನ್ನು ಕೇವಲ 3 ನಿಮಿಷ 53.68 ಸೆಕೆಂಡುಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನವನ್ನು ಪಡೆದುಕೊಂಡರು, ಹಾಗೂ ಇದೇ ವಿಭಾಗದಲ್ಲಿ ಕಾರ್ನಾಟಕ ರಾಜ್ಯದ ಅನೀಶ್ ಗೌಡ ಹಾಗೂ ಶಾನ್ ಗಂಗೂಲಿ ಅವರು 2 ಮತ್ತು 3 ಸ್ಥಾನವನ್ನು ಪಡೆದುಕೊಂಡರು. * ಮಹಿಳೆಯರ 400 ಮೀ.ಫ್ರೀಸ್ಟೈಲ್'ನಲ್ಲಿ ಅಸ್ಸಾಂನ ಶಿವಾಂಗಿ ಶರ್ಮಾ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ, ಹಾಗೂ ಇದೇ ವಿಭಾಗದಲ್ಲಿ ಮಹಾರಾಷ್ಟ್ರದ ಅನ್ಯಾ ವಾಲ ಅವರು 2ನೇ ಸ್ಥಾನ, ದೆಹಲಿಯ ಪ್ರಾಚಿ ಟೋಕಸ್ ಅವರು 3ನೇ ಸ್ಥಾನ ಪಡೆದುಕೊಂಡಿದ್ದಾರೆ.