Job Description: * ಪ್ರಸ್ತುತ ದ್ವಿಪಕ್ಷೀಯ ರಕ್ಷಣಾ ಒಪ್ಪಂದದಿಂದಾಗಿ ಭಾರತದ 6 ಹಡಗುಗಳು ಶ್ರೀಲಂಕಾ ದೇಶಕ್ಕೆ ತಲುಪಿವೆ, ಉಭಯ ದೇಶಗಳ ನೌಕಾಪಡೆಗಳು ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿವೆ. * ಭಾರತ-ಶ್ರೀಲಂಕಾ ನೌಕಾಪಡೆಗಳ ಜಂಟಿ ಸಮರಾಭ್ಯಾಸವು 4 ದಿನಗಳವರೆಗೆ ನಡೆಯಲಿದೆ, ಇದರಿಂದಾಗಿ ಉಭಯ ದೇಶಗಳ ರಕ್ಷಣಾ ಸಹಕಾರ ಇನ್ನು ಉತ್ತಮಗೊಳ್ಳಲಿದೆ ಎಂದು ಭಾರತೀಯ ವಿದೇಶಾಂಗ ಆಯುಕ್ತರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. * ಈ ನೌಕಾಪಡೆಯ ಜಂಟಿ ಸಮರಾಭ್ಯಾಸದಿಂದ ಉಭಯ ದೇಶಗಳ ಸೌಹಾರ್ದ ಸಂಬಂಧವು ಇನ್ನಷ್ಟು ಬಲಿಷ್ಠವಾಗಲಿದೆ, ಹಾಗೂ ತರಬೇತಿ ಪಡೆದಿರುವ ಯುವ ಅಧಿಕಾರಿಗಳನ್ನು ಗಡಿ ಭಾಗಕ್ಕೆ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.