Job Description: * ಪ್ರಸ್ತುತ ಅಫ್ಗಾನಿಸ್ತಾನ ದೇಶದಲ್ಲಿ ಇದೇ ಚಳಿಗಾಲದ ಸಮಯಕ್ಕೆ ಈ ದೇಶದಲ್ಲಿ 2.2 ಕೋಟಿಗೂ ಅಧಿಕ ಜನರು ತೀವ್ರ ಆಹಾರ ಸಮಸ್ಯೆ ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೀಸ್ಲೆ ಅವರು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. * ಸದ್ಯ ಯೆಮೆನ್ ಅಥವಾ ಸಿರಿಯಾ ದೇಶವು ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟಿಗಿಂತ ದೊಡ್ಡ ಬಿಕ್ಕಟ್ಟು ಅಫ್ಗಾನಿಸ್ತಾನ ದೇಶದಲ್ಲಿ ಎದುರಾಗಿದೆ, ಪ್ರಸ್ತುತ ಕಾಂಗೋದಲ್ಲಿ ಉಂಟಾಗಿರುವ ಆಹಾರ ಭದ್ರತೆಯ ಬಿಕ್ಕಟ್ಟಿಗಿಂತಲೂ ಅಫ್ಗಾನಿಸ್ತಾನ ದೇಶದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಅಫ್ಗಾನಿಸ್ತಾನದಲ್ಲಿ ಎದುರಾಗುತ್ತಿರುವ ಆಹಾರ ಕೊರತೆ ಬಗ್ಗೆ ತುರ್ತು ಕ್ರಮ ಕೈಗೊಳ್ಳದಿದ್ದರೆ, ಆ ದೇಶದಲ್ಲಿನ ಮಕ್ಕಳು ಹಾಗೂ ಲಕ್ಷಾಂತರ ಪ್ರಜೆಗಳು ಹಸಿವಿನಿಂದ ಸಾಯುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೀಸ್ಲೆ ಅವರು ದುಬೈನಲ್ಲಿ ರಾಯಿಟರ್ಸ್ ಸುದ್ದಿ ವಾಹಿನಿಯೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. * ಅಫ್ಗಾನಿಸ್ತಾನ ಒಟ್ಟಾರೆ 3.9 ಕೋಟಿ ಜನಸಂಖ್ಯೆಯನ್ನು ಹೊಂದಿದೆ, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 2.2 ಕೋಟಿಗಳಷ್ಟು ಜನರು ತೀವ್ರ ಆಹಾರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.