Job Description: * ಪ್ರಸ್ತುತ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ 152 ಸಾಕ್ಷಾಮ್ ಕೇಂದ್ರಗಳನ್ನು ಪ್ರಾರಂಭಿಸಿದೆ. * 2021 ರ ಅಕ್ಟೋಬರ್ 4 ರಿಂದ 8 ರ ನಡುವೆ ಸರಿ ಸುಮಾರು 152 ಆರ್ಥಿಕ ಸಾಕ್ಷರತೆ ಮತ್ತು ಸೇವಾ ವಿತರಣಾ ಕೇಂದ್ರ (ಸಾಕ್ಷಾಮ್ ಕೇಂದ್ರ)ಗಳನ್ನೂ 13 ರಾಜ್ಯಗಳ 77 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. * ಈ ಕೇಂದ್ರಗಳು ಸ್ವ-ಸಹಾಯ ಗುಂಪು ಗ್ರಾಮೀಣ ಪ್ರದೇಶಗಳ ಮೂಲಭೂತ ಆರ್ಥಿಕ ಅಗತ್ಯಗಳಿಗೆ ಅಂದರೆ ಸಾಲ, ಉಳಿತಾಯ, ಪಿಂಚಣಿ, ವಿಮೆ ಮುಂತಾದ ಹಣಕಾಸು ಸೇವೆಗಳಿಗೆ ಪರಿಹಾರ ಒದಗಿಸುವ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸಲಿವೆ. * ಗ್ರಾಮೀಣಾಭಿವೃದ್ಧಿ ಸಚಿವಾಲಯವು ಈ ಸಾಕ್ಷಮ್ ಎಂಬ ಮೊಬೈಲ್ ಹಾಗೂ ವೆಬ್ ಆಧಾರಿತ ಅಪ್ಲಿಕೇಶನ್'ನ್ನು ಆರಂಭಿಸಿದೆ.