Job Description: * ಯುನೈಟೆಡ್ ಸ್ಟೇಟ್ಸ್ ಹೈಪರ್ಸಾನಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. * ಈ ಹೈಪರ್ಸಾನಿಕ್ ಕ್ಷಿಪಣಿ ತಂತ್ರಜ್ಞಾನವು ನೂತನ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಹೊಂದಿದೆ,ಈ ಕ್ಷಿಪಣಿ ತಂತ್ರಜ್ಞಾನವನ್ನು ಇದಕ್ಕೂ ಮೊದಲು ರಷ್ಯಾ ಮತ್ತು ಚೀನಾ ದೇಶಗಳು ನಿಯೋಜನೆ ಮಾಡಿವೆ. * ಈ ಕ್ಷಿಪಣಿ ತಂತ್ರಜ್ಞಾನದ ಪರೀಕ್ಷೆಯನ್ನು ಯುನೈಟೆಡ್ ಸ್ಟೇಟ್ಸ್ ವರ್ಜೀನಿಯಾದ ವಾಲೊಪ್ಸ್ ದಲ್ಲಿನ ನಾಸಾ(NASA) ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು, ಈ ಕ್ಷಿಪಣಿನ್ನು ನೌಕಾಪಡೆ ವಿನ್ಯಾಸಗೊಳಿಸಿದೆ ಎಂದು ತಿಳಿಸಿದ್ದಾರೆ. * ಚೀನಾ ದೇಶವು 2021 ರ ಆಗಸ್ಟ್ ನಲ್ಲಿ ಪರಮಾಣು ಸಾಮರ್ಥ್ಯದೊಂದಿಗೆ 'DF-17' ಎಂಬ ಹೈಪರ್ಸಾನಿಕ್ ಮಧ್ಯಮ-ಶ್ರೇಣಿಯ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿದೆ, ಇದು ಸರಿ ಸುಮಾರು 2000 ಕಿ.ಮೀ. ಪರಮಾಣು ಸಿಡಿತಲೆಗಳನ್ನು ಹೊತ್ತು ಸಾಗಲಿದೆ ಎಂದು ತಿಳಿಸಿದ್ದಾರೆ. * ರಷ್ಯಾ ದೇಶವು ಜಿರ್ಕಾನ್ ಎಂಬ ಹೈಪರ್ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿದೆ.