Job Description: * ಪ್ರಸ್ತುತ ದಕ್ಷಿಣ ಕೊರಿಯಾ ರಾಷ್ಟ್ರವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊಟ್ಟಮೊದಲ ಬಾಹ್ಯಾಕಾಶ ರಾಕೆಟ್'ನ್ನು ಪರೀಕ್ಷಾರ್ಥ ಪ್ರಯೋಗವನ್ನು ಯಸ್ಸವಿಗೊಳಿಸಿದೆ. * ಉಡಾವಣೆಯಾಗಿರುವ ರಾಕೆಟ್'ನ್ನು ಭೂಮಿಯಿಂದ 600 ರಿಂದ 800 ಕಿ.ಮೀ ದೂರದ ಕಕ್ಷೆಗೆ ತಲುಪಿಸಲಾಗಿದೆ ಎಂದು ಅಂದಾಜಿಸಲಾಗಿದೆ. * ಸ್ವದೇಶಿ ತಂತ್ರಜ್ಞಾನಗಳನ್ನೂ ಬಳಸಿಕೊಂಡು ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ 10ನೇ ರಾಷ್ಟ್ರ ದಕ್ಷಿಣ ಕೊರಿಯಾ ಆಗಿದೆ, ಅಷ್ಟೇ ಅಲ್ಲದೇ 2030ರ ವೇಳೆಗೆ ಚಂದ್ರ ಗ್ರಹಕ್ಕೆ ಬಾಹ್ಯಾಕಾಶ ನೌಕೆ ರವಾನಿಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ. * ದಕ್ಷಿಣ ಕೊರಿಯಾ ರಾಷ್ಟ್ರವು 2022ರಲ್ಲಿ ಮತ್ತೊಮ್ಮೆ ಈ ರಾಕೆಟ್ ಉಡಾವಣೆ ಮಾಡಲಿದ್ದಾರೆ ಹಾಗೂ ಇನ್ನು ಅನೇಕ ಬಾರಿ ಪರೀಕ್ಷೆಗೆ ಒಳಪಡಿಸಲು ವಿಜ್ಞಾನಿಗಳು ಹಾಗೂ ಎಂಜಿನಿಯರ್ಗಳು ಚಿಂತನೆ ನಡೆಸಿದ್ದಾರೆ.