Job Description: * ಪ್ರಸ್ತುತ ಭಾರತ-ಬ್ರಿಟನ್ ವಿದೇಶಾಂಗ ಅಧಿಕಾರಿಗಳು ವಿಶ್ವಸಂಸ್ಥೆಯ ಸುಧಾರಣಾ ಕ್ರಮಗಳು, ಭಯೋತ್ಪಾದನೆ ನಿಗ್ರಹ, ಶಾಂತಿಪಾಲನೇ ಹಾಗೂ ಹವಾಮಾನ ಬದಲಾವಣೆ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. * ಭಾರತ - ಬ್ರಿಟನ್ ಉಭಯ ದೇಶಗಳ ಅಧಿಕಾರಿಗಳ ಮಧ್ಯೇ ನಡೆದಿರುವ 2ನೇ ಬಹುಪಕ್ಷೀಯ ಚರ್ಚೆ ಇದಾಗಿದೆ. * ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ್ ಗುಪ್ತಾ, ಹಾಗೂ ಬ್ರಿಟನ್ ಪರವಾಗಿ ಬ್ರಿಟನ್ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ ರಾಜಕೀಯ ಉಪ ನಿರ್ದೇಶಕ ಹ್ಯಾರಿಯೇಟ್ ಮ್ಯಾಥ್ಯೂ ಅವರು ಭಾಗಿಯಾಗಿದ್ದರು, ಈ ಅಧಿಕಾರಿಗಳು ಕಾಮನ್ವೆಲ್ತ್ ಯೋಜನೆಯ ಕಾರ್ಯತಂತ್ರದ ವಿಚಾರಗಳನ್ನು ವಿನಿಯಮ ಮಾಡಿಕೊಂಡರು. * ಈ ಉಭಯ ರಾಷ್ಟ್ರಗಳು ಬಹುಪಕ್ಷೀಯ ವಿಚಾರದಲ್ಲಿ ತಮ್ಮ ತಮ್ಮ ಸಹಕಾರವನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಪರಸ್ಪರ ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.