Job Description: * ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ 2020-2021 ನೇ ಸಾಲಿನ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು. * ರಾಜ್ಯ ಸರ್ಕಾರವು 2020ನೇ ಸಾಲಿಗೆ 5 ಸಾಧಕರು ಹಾಗೂ 2021ನೇ ಸಾಲಿಗೆ 6 ಸಾಧಕರು, ಒಟ್ಟಾರೆ 11 ಸಾಧಕರಿಗೆ ಈ ಬಾರಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಲಾಗಿದೆ. * 2020 ನೇ ಸಾಲಿನಲ್ಲಿ ವಾಲ್ಮೀಕಿ ಪ್ರಶಸ್ತಿ ಪಡೆದವರು: ಡಾ.ಕೆ.ಆರ್. ಪಾಟೀಲ್, ಡಾ.ಬಿ. ಎಲ್.ವೇಣು, ಗೌರಿ ಕೊರಗ, ಮಾರಪ್ಪ ನಾಯಕ, ಸಿರಿಗೆರೆ ತಿಪ್ಪೇಶ್ * 2021ನೇ ಸಾಲಿನಲ್ಲಿ ವಾಲ್ಮೀಕಿ ಪ್ರಶಸ್ತಿ ಪಡೆದವರು: ಕೆ.ಸಿ.ನಾಗರಾಜು, ಲಕ್ಷ್ಮಿ ಗಣಪತಿ ಸಿದ್ದಿ, ಪ್ರೊ.ಎಸ್.ಆರ್.ನಿರಂಜನ, ಭಟ್ರಹಳ್ಳಿ ಗೂಳಪ್ಪ, ಅಶ್ವತ್ಥ ರಾಮಯ್ಯ, ಜಂಭಯ್ಯ ನಾಯಕರಿಗೆ ಪ್ರಶಸ್ತಿ ನೀಡಲಾಗಿದೆ. * ಮಹರ್ಷಿ ವಾಲ್ಮೀಕಿ ರಾಮಾಯಣದ ಲೇಖಕ, ಇವರನ್ನು ಈ ಮಹಾಕಾವ್ಯವಾದ ಆದಿ ಕವಿ ಎಂದು ಗೌರವಿಸಲಾಗುತ್ತದೆ. * ಮೂಲತಃ ವಾಲ್ಮೀಕಿ ರಚಿಸಿರುವ ರಾಮಾಯಣವು 24,000 ಶ್ಲೋಕಗಳನ್ನು ಒಳಗೊಂಡಿದೆ, ಹಾಗೂ ಈ ರಾಮಾಯಣವು ಸುಮಾರು 480,002 ಪದಗಳಿಂದ ಕೂಡಿದೆ, ರಾಮಾಯಣವು ರಾಜಕುಮಾರನ ಕಥೆಯನ್ನು ಹೇಳುತ್ತದೆ. * ಬ್ರಿಟಿಷ್ ವಿಡಂಬನಕಾರ ಆಬ್ರೆ ಮೆನೆನ್ ತಿಳಿಸಿರುವ ಪ್ರಕಾರ ವಾಲ್ಮೀಕಿಯನ್ನು ಒಬ್ಬ ಸಾಹಿತ್ಯ ಪ್ರತಿಭೆ ಎಂದು ಗುರುತಿಸಲಾಗಿದೆ.