Job Description: * ಪ್ರಸ್ತುತ ಭಾರತೀಯ ʼತಕಾಚಾರ್ʼ ಸಂಸ್ಥೆಯು ಬಿಬಿಸಿಯ 1 ಮಿಲಿಯನ್ ಪೌಂಡ್ ಬಹುಮಾನದ ʼಅರ್ಥ್ಶಾಟ್ʼ ಪ್ರಶಸ್ತಿ ಪಡೆದುಕೊಂಡಿದೆ. * ಪರಿಸರಕ್ಕೆ ಯಾವುದೇ ರೀತಿಯ ಹಾನಿ ಉಂಟಾಗದ ರೀತಿಯಲ್ಲಿ ಕೃಷಿ ತ್ಯಾಜ್ಯವನ್ನು ಉಪಯೋಗಿ ಉತ್ಪನ್ನಗಳನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಆವಿಷ್ಕರಿಸಿರುವ ವಿದ್ಯುತ್ ಮೋಹನ್ ಅವರ ತಕಾಚಾರ್ ಸಂಸ್ಥೆಗೆ "ಅರ್ಥ್ಶಾಟ್" ಪ್ರಶಸ್ತಿಯು ಕ್ಲೀನ್ ಔಟ್ ಏರ್ ವಿಭಾಗದಲ್ಲಿ ಲಭಿಸಿದೆ. * ಈ ಪ್ರಶಸ್ತಿಯ 1 ಮಿಲಿಯನ್ ಪೌಂಡ್ ಬಹುಮಾನವನ್ನು ಹೊಂದಿರಲಿದೆ. * 2030ರೊಳಗೆ ಜಗತ್ತು ಎದುರಿಸುತ್ತಿರುವ ಪರಿಸರಕ್ಕೆ ಸಂಬಂಧಿಸಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕನಿಷ್ಠ 50 ಪರಿಹಾರಗಳನ್ನು ನೀಡುವವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. * ಬಿಬಿಸಿ ಈ ಅರ್ಥ್ಶಾಟ್ ಪ್ರಶಸ್ತಿಯನ್ನು ಮುಂದಿನ 10 ವರ್ಷಗಳಲ್ಲಿ ಪ್ರತಿ ವರ್ಷ 5 ಜನರಿಗೆ ನೀಡಲಿದೆ ಎಂದು ತಿಳಿಸಿದೆ.