Job Description: * ಪ್ರಸ್ತುತ ನ್ಯೂಜಿಲೆಂಡ್'ನಲ್ಲಿನ ಜನರಿಗೆ ಕೋವಿಡ್-19 ಲಸಿಕೆ ಹಾಕುವ ಹಿನ್ನೆಲೆಯಲ್ಲಿ 'ವ್ಯಾಕ್ಸಾಥಾನ್' ಎಂಬ ಲಸಿಕಾ ಉತ್ಸವವನ್ನು ನಿಯೋಜಿಸಲಾಗಿದೆ, ನ್ಯೂಜಿಲೆಂಡ್ನ ಆರೋಗ್ಯ ಕಾರ್ಯಕರ್ತರು ಈ ಅಭಿಯಾನದ ಮೂಲಕ ಸಾರ್ವಜನಿಕರಿಗೆ ದಾಖಲೆ ಪ್ರಮಾಣದಲ್ಲಿ ಕೋವಿಡ್-19 ಲಸಿಕೆಗಳನ್ನು ನೀಡಿದ್ದಾರೆ. * ಈ 'ವ್ಯಾಕ್ಸಾಥಾನ್' ಲಸಿಕಾ ಅಭಿಯಾನವು ಸತತ ಎಂಟು ಗಂಟೆಗಳ ಕಾಲ ಟಿವಿ ಹಾಗೂ ಆನ್ಲೈನ್ ಜಾಲತಾಣಗಳಲ್ಲಿ ಪ್ರಸಾರವಾಗಿದೆ. * ನ್ಯೂಜಿಲೆಂಡ್ನ ಆರೋಗ್ಯ ಕಾರ್ಯಕರ್ತರು ಈ ಲಸಿಕಾ ಅಭಿಯಾನದ ಮೂಲಕ 1.20 ಲಕ್ಷ ಜನರಿಗೆ ಕೋವಿಡ್-19 ಲಸಿಕೆಯನ್ನು ಹಾಕಿದ್ದಾರೆ, ಈ ಮೊದಲು ಪ್ರತಿ ನಿತ್ಯ ಸರಾಸರಿ 93 ಸಾವಿರ ಜನರು ಕೋವಿಡ್-19 ಲಸಿಕೆ ಪಡೆಯುತ್ತಿದ್ದರು. * ನ್ಯೂಜಿಲೆಂಡ್ನ ಪ್ರಧಾನ ಮಂತ್ರಿ ಜೆಸಿಂಡ ಅರ್ಡೆಮ್ ಅವರು ಈ ಲಸಿಕಾ ಅಭಿಯಾನ ಬಗ್ಗೆ ಅಲ್ಲಿನ ಲಸಿಕಾ ಕೇಂದ್ರದ ಸಿಬ್ಬಂದಿ ಜೊತೆ ಮಾತುಕತೆಯನ್ನು ನಡೆಸಿದರು.