Job Description: * ಪ್ರಸ್ತುತ 2021ರ ಜಾಗತಿಕ ಹಸಿವು ಸೂಚ್ಯಂಕದ 116 ರಾಷ್ಟ್ರಗಳ ಪೈಕಿ ಭಾರತವು 101ನೇ ಸ್ಥಾನ ಪಡೆದಿದೆ, ಈ ಮೊದಲು ಭಾರತ 2020 ರಲ್ಲಿ 94ನೇ ಸ್ಥಾನದಲ್ಲಿತ್ತು, ಈ ವರ್ಷ ಭಾರತವು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಕುಸಿತ ಕಂಡಿದೆ. * 2021ರ ಜಾಗತಿಕ ಹಸಿವು ಸೂಚ್ಯಂಕದ ಅಗ್ರ ಸ್ಥಾನವನ್ನು ಚೀನಾ, ಭ್ರಜಿಲ್ ಮತ್ತು ಕುವೈತ್, ಹಾಗೂ ಇನ್ನು 18 ರಾಷ್ಟ್ರಗಳು ಹಂಚಿಕೊಂಡಿವೆ ಎಂದು ಗ್ಲೋಬಲ್ ಹಂಗರ್ ಇಂಡೆಕ್ಸ್ ಜಾಲತಾಣವು ಮಾಹಿತಿ ನೀಡಿದೆ. * 2021 ರ ಜಾಗತಿಕ ಹಸಿವು ಸೂಚ್ಯಂಕವನ್ನು ಐರಿಶ್ ನೆರವಿನ ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫೆ ಸಂಸ್ಥೆ ಜಂಟಿಯಾಗಿ ಸಿದ್ಧಪಡಿಸಿವೆ. * ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಪಾಕಿಸ್ತಾನ 92ನೇ ಸ್ಥಾನ, ನೇಪಾಳ 76ನೇ ಸ್ಥಾನ, ಬಾಂಗ್ಲಾದೇಶ 76ನೇ ಸ್ಥಾನ, ಹಾಗೂ ಮಾನ್ಮಾರ್ 71ನೇ ಸ್ಥಾನ ಪಡೆದುಕೊಂಡಿದೆ, ಇದೀಗ ಈ ಎಲ್ಲ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಕಡಿಮೆ ಪ್ರಮಾಣದ ಹಸಿವಿನ ಸಮಸ್ಯೆಯಿದೆ ಎಂದು ತಿಳಿದು ಬಂದಿದೆ.