Job Description: * ಪ್ರಸ್ತುತ ಭಾರತೀಯ ರೈಲ್ವೆ ವಲಯದಾದ್ಯಂತ ತಡೆರಹಿತ ಸಮಗ್ರ ಸರಕು ಸಾಗಣೆಯನ್ನು ಸುಧಾರಿಸವ ನಿಟ್ಟಿನಲ್ಲಿ ಮುಂಬರುವ 3 ರಿಂದ 4 ವರ್ಷಗಳಲ್ಲಿ ಸರಿ ಸುಮಾರು 500 ಮಲ್ಟಿ ಮೋಡ್ ಕಾರ್ಗೋ ಟರ್ಮಿನಲ್ಗಳನ್ನು ನಿರ್ಮಾಣ ಮಾಡಲಿದೆ, ಈ ನಿರ್ಮಾಣದ ಕಾರ್ಯಕ್ಕೆ ಸುಮಾರು 50 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. * ಭಾರತೀಯ ರೈಲ್ವೆ ಟರ್ಮಿನಲ್ಗಳನ್ನು ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ನಿರ್ಮಿಸಲಿದೆ, ವಿಮಾನ ನಿಲ್ದಾಣಗಳು, ಹೆದ್ದಾರಿಗಳು, ಬಂದರುಗಳು ಮತ್ತು ನದಿ ಜಲಮಾರ್ಗಗಳಲ್ಲಿ ವಿವಿಧ ವಿಧಾನಗಳ ತಡೆರಹಿತವಾಗಿ ಸರಕು ಸಾಗಣೆಗೆ ಸಂಪರ್ಕಿಸಲು ಈ ಟರ್ಮಿನಲ್'ನ್ನು ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ, ಅಸತೇ ಅಲ್ಲದೆ ಕಳೆದ 7 ವರ್ಷಗಳಲ್ಲಿ 24000 ಕಿ. ಮೀ. ಗಳಷ್ಟು ರೈಲ್ವೆ ಹಳಿಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.