Job Description: * ಅಮೇರಿಕಾ ಮೂಲದ ಖಾಸಗಿ ಸಂಸ್ಥೆ ಬಿಯಾನ್ ಕ್ಯಾಪಿಟಲ್ ಎಂಬ ಸಂಸ್ಥೆಯು ಭಾರತೀಯ ಕಂಪನಿಗಳಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಬಂಡವಾಳ ಹೂಡಲು ಆಸಕ್ತಿ ತೋರಿಸಿದೆ. * ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ಸುಧಾರಿಸುತ್ತಿರುವದರಿಂದ ಭಾರತದಲ್ಲಿ ಈ ಸಂಸ್ಥೆ ಆಸಕ್ತಿವಹಿಸಿದೆ ಎಂದು ಸಂಸ್ಥೆಯ ಸಹ ಅಧ್ಯಕ್ಷ ಸ್ಟಿಫನ್ ಪಗ್ಲಿಕಾ ಮಾಹಿತಿ ನೀಡಿದ್ದಾರೆ. * ಅಮೆರಿಕಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗಿಯಾಗಲು ಅಮೇರಿಕಾಕ್ಕೆ ತೆರಳಿರುವ ಸೀತಾರಾಮನ್ ಅವರೊಂದಿಗೆ ಬಿಯಾನ್ ಕ್ಯಾಪಿಟಲ್ ಸಂಸ್ಥೆ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.