Job Description: * ಪ್ರಸ್ತುತ ಭಾರತೀಯ ಮೂಲದ 6 ವರ್ಷದ ಬಾಲಕಿ ಅಲೀಶಾ ಗದಿಯಾ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನೀಡುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ, ಈ ಭಾರತೀಯ ಅಲೀಶಾ ಗದಿಯಾ ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಳು, ಈ ಕಾರಣದಿಂದ ಈ ಪ್ರಶಸ್ತಿಯನ್ನು ಪಡೆದಿದ್ದಾಳೆ. * ಭಾರತೀಯ ಅಲೀಶಾ ಗದಿಯಾ ಎನ್ ಜಿ ಒ ಕೂಲ್ ಅರ್ತ್'ನ ಸದಸ್ಯೆಯಾಗಿದ್ದಾಳೆ, ಇದು ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶಗಳ ಬಗೆಗಿನ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತದೆ. * ಅಲೀಶಾ ಗದಿಯಾ ಪ್ರಸ್ತುತ ಜಗತಿನಾದ್ಯಂತ ಕಾರ್ಖಾನೆಗಳು ಯಾವ ರೀತಿಯಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ ಎಂಬ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾಳೆ, ಅಷ್ಟೇ ಅಲ್ಲದೇ ಹವಾಮಾನ ಬದಲಾವಣೆ ಸಮಸ್ಯೆಗಳ ಜಾಗೃತಿ ಅಭಿಯಾನದಲ್ಲಿ ಸುಮಾರು 3 ಲಕ್ಷ ರೂ.ಗಳಷ್ಟು ದೇಣಿಗೆಯನ್ನು ಕೂಡ ಸಂಗ್ರಹ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. * ಇದಕ್ಕೆ ಮೊದಲು ಅರಣ್ಯನಾಶದ ಬಗ್ಗೆ ಜನರ ಗಮನ ಸೆಳೆಯಲು 80 ಕಿ.ಮೀ ಸೈಕಲ್ ರೈಡ್ ಜಾಥಾ ಆಯೋಜಿಸಿದ್ದಳು, ಇದಕ್ಕೆ ಬ್ರಿಟನ್ ರಾಣಿ ಬೆಂಬಲವನ್ನು ನೀಡಿದ್ದರು.