Job Description: * ಪ್ರಸ್ತುತ ಭಾರತಕ್ಕೆ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿಗಳು ಲಭಿಸಿವೆ, ಇತ್ತೀಚಿಗೆ ಭಾರತೀಯ ಹಾಕಿ ಪಟುಗಳು ಟೋಕಿಯೊ ಒಲಿಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. * ಭಾರತಕ್ಕೆ ಪುರುಷರ ವಿಭಾಗದಲ್ಲಿ ಲಭಿಸಿರುವ ಅಂತಾರಾಷ್ಟ್ರೀಯ ಹಾಕಿ ಪ್ರಶಸ್ತಿಗಳು: - ಹರ್ಮನ್ಪ್ರೀತ್ ಸಿಂಗ್ ಅವರು ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ. - ವಿವೇಕ್ ಸಾಗರ್ ಪ್ರಸಾದ್'ಗೆ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿ ಲಭಿಸಿದೆ. - ಪಿ.ಆರ್. ಶ್ರೀಜೇಶ್ ಅವರಿಗೆ ಶ್ರೇಷ್ಠ ಪುರುಷ ಗೋಲ್ಕೀಪರ್ ಪ್ರಶಸ್ತಿ ಲಭಿಸಿದೆ. - ಗ್ರಹಾಂ ರೀಡ್ಗೆ ಶ್ರೇಷ್ಠ ಪುರುಷರ ಕೋಚ್ ಪ್ರಶಸ್ತಿ ಲಭಿಸಿದೆ. * ಅಂತಾರಾಷ್ಟ್ರೀಯ ಹಾಕಿ ಪ್ರಶಸ್ತಿಗಳುನ್ನು ಪಡೆದ ಮಹಿಳಾ ವಿಭಾಗ: - ಗುರ್ಜಿತ್ ಕೌರ್ ಅವರು ವರ್ಷದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. - ಸವಿತಾ ಪುನಿಯ ಅವರಿಗೆ ಶ್ರೇಷ್ಠ ಮಹಿಳಾ ಗೋಲ್ಕೀಪರ್ ಪ್ರಶಸ್ತಿ ಲಭಿಸಿದೆ. - ಶರ್ಮಿಳಾದೇವಿಗೆ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. - ಮರಿನ್ ಸೋರ್ಡ್ ಅವರಿಗೆ ಮಹಿಳಾ ತಂಡದ ಕೋಚ್ ಪ್ರಶಸ್ತಿ ಲಭಿಸಿದೆ.