Job Description: * ವಿಶ್ವ ಆರೋಗ್ಯ ಸಂಸ್ಥೆ (WHO)ಯು ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ಅನುಮೋದನೆ ನೀಡಿದೆ. * ಈ ಮೊದಲು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೇರಿ ಪ್ರತಿ ವರ್ಷ ಅಂದಾಜು 5,00,000 ಜನರು ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದಾರೆ. * ಮಲೇರಿಯಾದಿಂದ ಆಫ್ರಿಕಾ ಭಾಗದಲ್ಲಿ ಅತಿಹೆಚ್ಚಿನ ಸಾವುಗಳು ಉಂಟಾಗುತ್ತಿವೆ. * ವಿಶ್ವ ಆರೋಗ್ಯ ಸಂಸ್ಥೆಯು 'ಮಸ್ಕಿರಿಕ್ಸ್ (Mosquirix)' ಎಂಬ ಹೆಸರಿನ ಲಸಿಕೆಗೆ ಅನುಮೋದನೆ ನೀಡಿದೆ, ಈ ಲಸಿಕೆಯು ಮಲೇರಿಯಾ ಅಷ್ಟೇ ಅಲ್ಲದೇ ಬೇರೆ ಯಾವುದೇ ಜೀವಿಯಿಂದ ಉಂಟಾಗುವ ರೋಗಗಳನ್ನೂ ತಡೆಯುತ್ತದೆ. * ಅನಾಫಿಲಿಸ್ ಹೆಣ್ಣು ಸೊಳ್ಳೆ ಕಡಿತದಿಂದ ಮನುಷ್ಯನ ದೇಹಕ್ಕೆ ಪ್ಲಾಸ್ಮೋಡಿಯಾ ರೋಗ ನಿರೋಧಕ ಶಕ್ತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಹಾಗೂ ಇದರಿಂದ ಫಾಲ್ಸಿಪರಮ್ ಮಲೇರಿಯಾ ಹರಡುತ್ತದೆ. * ಇದೀಗ ಗ್ಲ್ಯಾಕ್ಸೊಸ್ಮಿತ್ಕ್ಲೈನ್ ಕಂಪನಿಯು ಮಲೇರಿಯಾ ತಡೆಗಟ್ಟುವ ಹೊಸ ಲಸಿಕೆಯನ್ನು ಸಿದ್ಧಪಡಿಸಿದೆ, ಈ ಮಲೇರಿಯಾ ಲಸಿಕೆಯನ್ನು ಮೊದಲ ಲಸಿಕೆಯನ್ನು ಆಫ್ರಿಕಾದಾದ್ಯಂತ ಇರುವ ಮಕ್ಕಳಿಗೆ ನೀಡಬೇಕೆಂದು ಆದೇಶಿಸಿದೆ. * ಈ ಮಲೇರಿಯಾ ಪ್ರಕರಣಗಳಿರುವ ರಾಷ್ಟ್ರಗಳಿಗೆ ಲಸಿಕೆ ಪೂರೈಕೆಮಾಡುವದರಿಂದ, ಪ್ರಸ್ತುತ 54 ಲಕ್ಷ ಪ್ರಕರಣಗಳು ಮತ್ತು 23,000 ಮಕ್ಕಳ ಸಾವುಗಳನ್ನೂ ತಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಅಮೇರಿಕಾದಲ್ಲಿ ಪ್ರತಿ ವರ್ಷವು 2,000 ಪ್ರಕರಣಗಳು ದಾಖಲಾಗುತ್ತಿವೆ, ಅದು ಹೆಚ್ಚಾಗಿ ಬೇರೆ ರಾಷ್ಟ್ರಗಳಿಂದ ಬಂದಿರುವ ಪ್ರಜೆಗಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. * ಪ್ರಸ್ತುತ ಕೀನ್ಯಾ, ಮಾಲಾವಿ, ಮತ್ತು ಘಾನಾದಲ್ಲಿ ಲಸಿಕೆಯ ಪ್ರಯೋಗವನ್ನು ಆರಂಭಿಸಲಾಗಿದೆ. ಇದೀಗ 23 ಲಕ್ಷಕ್ಕೂ ಅಧಿಕ ಲಸಿಕೆ ಹಾಕಲಾಗಿದೆ, ಅದರಲ್ಲಿ 8 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.