Job Description: * ಪ್ರಧಾನಿ ಮೋದಿ ಅವರು ದೇಶಾದ್ಯಂತ 35 ಪಿಎಸ್ಎ ಆಕ್ಸಿಜನ್ ಪ್ಲಾಂಟ್ಗಳನ್ನು ಉದ್ಘಾಟಿಸಿದರು. * "ಪಿಎಂ ಕೇರ್ಸ್" ಅಡಿಯಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಕ್ಸಿಜನ್ ಪ್ಲಾಂಟ್ ಲಭ್ಯವಾಗಿವೆ, ಪ್ರಸ್ತುತ ಪಿಎಂ ಕೇರ್ಸ್ ದೇಶಾದ್ಯಂತ ಒಟ್ಟು 1,224 ಆಮ್ಲಜನಕ ಸ್ಥಾವರಗಳಿಗೆ ಧನಸಹಾಯ ನೀಡಿದೆ, ಅವುಗಳಲ್ಲಿ 1,100 ಕ್ಕೂ ಆಕ್ಸಿಜನ್ ಪ್ಲಾಂಟ್ಗಳು ಪ್ರತಿ ದಿನಕ್ಕೆ 1,750 ಮೆ.ಟನ್ ಆಮ್ಲಜನಕವನ್ನು ಉತ್ಪಾದಣೆ ಮಾಡುತ್ತಿವೆ. * ಪ್ರಧಾನಿ ಮೋದಿ ಅವರು ಇದೇ ಸಂಧರ್ಭದಲ್ಲಿ, ಲಸಿಕೆ ಕಾರ್ಯಕ್ರಮವು ಶೀಘ್ರವೇ ಒಂದು ಬಿಲಿಯನ್ ಜನರನ್ನ ತಲುಪಲಿದೆ ಎಂದಿದ್ದಾರೆ, ಅಷ್ಟೇ ಅಲ್ಲದೆ ಭಾರತವು ಅತೀ ಕಡಿಮೆ ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನ ನೀಡಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. * ಪ್ರಸ್ತುತ ಭಾರತವು ಸುಮಾರು 3,000 ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ, ಈ ಮೊದಲು ಮಾಸ್ಕ್ಗಳನ್ನು ಆಮದು ಮಾಡಿಕೊಲ್ಲಲಾಗುತ್ತಿತ್ತು, ಆದರೆ ಇದೀಗ ಭಾರತದಲ್ಲಿಯೇ ಮಾಸ್ಕ್ಗಳನ್ನು ತಯಾರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.