Job Description: * ಪ್ರಸ್ತುತ ವಿಶ್ವಸಂಸ್ಥೆಯ ಉಪಕ್ರಮ ದಿನವಾದ ವಿಶ್ವ ಆವಾಸಸ್ಥಾನ ದಿನವನ್ನು ಅಕ್ಟೋಬರ್. 4 ರಂದು ಆಚರಿಸಲಾಯಿತು. ಹಾಗೂ ಈ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ಮೊದಲ ಸೋಮವಾರ ಆಚರಿಸಲಾಗುತ್ತದೆ. * ಈ ವಿಶ್ವ ಆವಾಸಸ್ಥಾನ ದಿನವನ್ನು ಆಶ್ರಯ ಹಾಗೂ ಮೂಲಭೂತ ಹಕ್ಕನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಚರಣೆ ಮಾಡಲಾಗುತ್ತದೆ. *2021 ನೇ ವರ್ಷದ ವಿಶ್ವ ಆವಾಸಸ್ಥಾನ ದಿನವನ್ನು 'ಕಾರ್ಬನ್ ಮುಕ್ತ ಪ್ರಪಂಚಕ್ಕಾಗಿ ನಗರ ಕ್ರಿಯೆಯನ್ನು ಉತ್ತಮಗೊಳಿಸುವಿಕೆ' ಧ್ಯೆಯೇ ವ್ಯಾಕದ ಅಡಿಯಲ್ಲಿ ಆಚರಿಸಲಾಗಿದೆ. * ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1985 ರಲ್ಲಿ ಈ ವಿಶ್ವ ಆವಾಸಸ್ಥಾನ ದಿನವನ್ನು ವಾರ್ಷಿಕವಾಗಿ ಆಚರಿಸುವ ನಿರ್ಧಾರವನ್ನು ಕೈಗೊಂಡಿತು, ಇದಾದ ಬಳಿಕ 1986 ರಲ್ಲಿ ಕೀನ್ಯಾದ ನೈರೋಬಿಯಲ್ಲಿ 'ಆಶ್ರಯವು ನನ್ನ ಹಕ್ಕು' ಎಂಬ ಧ್ಯೆಯೇ ವ್ಯಾಕದ ಅಡಿಯಲ್ಲಿ ವಿಶ್ವ ಆವಾಸಸ್ಥಾನ ದಿನವನ್ನು ಆಚರಣೆ ಮಾಡಲಾಯಿತು. * ಈ ಮೊದಲು 1989 ರಲ್ಲಿ ವಿಶ್ವಸಂಸ್ಥೆಯ ಮಾನವ ವಸಾಹತು ಕಾರ್ಯಕ್ರಮವು, ಈ ಆವಾಸಸ್ಥಾನ ಸಮಸ್ಯೆಗಳಿಗೆ ಪರಿಹಾರವನ್ನು ಬಗೆಹರಿಸಿಕೊಳ್ಳಲು ದೇಶಗಳನ್ನು ಪ್ರೋತ್ಸಾಹಿಸುವ ಸಲುವಾಗಿ UN-Habitat Scroll of Honour ಪ್ರಶಸ್ತಿಯನ್ನು ಪರಿಚಯಿಸಿದೆ.