Job Description: * ಪ್ರಸ್ತುತ ಬೆಂಗಳೂರು ಮತ್ತು ಮುಂಬೈನ ಜೀವ ವಿಜ್ಞಾನ ತಜ್ಞರ ತಂಡವು ಸರಿ ಸುಮಾರು 12 ಜಾತಿಯ ಹಲ್ಲಿಗಳನ್ನು ಪಶ್ಚಿಮ ಘಟ್ಟಗಳಲ್ಲಿ ಪತ್ತೆ ಹಚ್ಚಿದ್ದಾರೆ. * ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾಗಿರುವ ಹಲ್ಲಿಗಳು ಬಲಿಷ್ಠ, ಮಿಂಚಿನ ವೇಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವೇಗವಾಗಿ ಚಲಿಸುತ್ತವೆ, ಅಷ್ಟೇ ಅಲ್ಲದೆ ಪಶ್ಚಿಮ ಘಟ್ಟಗಳಲ್ಲಿ ಇನ್ನೂ ಸುಮಾರು 18 ಜಾತಿಯ ಹಲ್ಲಿಗಳು ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. * ಈ ಹಿಂದೆ 2009 ರಿಂದ 2014 ರವರೆಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಅಧೀನದಲ್ಲಿರುವ ಸೆಂಟರ್ ಫಾರ್ ಎಕಾಲಜಿಕಲ್ ಸೈನ್ಸಸ್, ನ್ಯಾಶನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಹಾಗೂ ಮುಂಬೈನ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಸ್ಥೆಯ ತಜ್ಞರ ತಂಡವು ಸಂಶೋಧನೆಯನ್ನು ನಡೆಸಿ ಈ ಹಲ್ಲಿಯ ಪ್ರಭೇದಗಳನ್ನು ಪತ್ತೆ ಮಾಡಿದ್ದಾರೆ. * ಈ ಹಲ್ಲಿಯ ಪ್ರಭೇದಗಳು ಪಶ್ಚಿಮ ಹಾಗೂ ಪೂರ್ವ ಘಟ್ಟಗಳು, ಈಶಾನ್ಯ ವಲಯ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ. * ಸಂಶೋಧಕರು ಹೊಸದಾಗಿ ಪತ್ತೆಯಾಗಿರುವ 12 ಪ್ರಭೇದಗಳ ಹಲ್ಲಿಗಳಿಗೆ ಸಿನೆಮಾಪ್ಸಿಸ್ ಜಾಕೇಲಿ ಅಥವಾ ಜಾಕೀಸ್ ಡೇ ಗಿಕೋ ಎಂದು ಹೆಸರಿಟ್ಟಿದ್ದಾರೆ.