Job Description: * ಭಾರತ-ಅಮೇರಿಕ ದೇಶಗಳು 2021 ರ ಆರೋಗ್ಯ ಸಂವಾದದ 4 ನೇ ಅಧಿವೇಶನವನ್ನು ಉದ್ಘಾಟಿಸಿವೆ, ಭಾರತವು ಈ ಆರೋಗ್ಯ ಸಂವಾದದ ಅಧಿವೇಶನವನ್ನು ಆಯೋಜಿಸುತ್ತಿದೆ. * ಪ್ರಸ್ತುತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಭಾರತಿ ಪ್ರವೀಣ್ ಪವಾರ್ ಅವರು ಭಾರತ-ಅಮೇರಿಕ ನಡುವಿನ ಪರಸ್ಪರ ಒಗ್ಗಟ್ಟುನ್ನು ಬೆಂಬಲಿಸಿದರು. * ಆರೋಗ್ಯ ಸಂವಾದದ 4 ನೇ ಅಧಿವೇಶನದಲ್ಲಿ: - ಸಾಂಕ್ರಾಮಿಕ ರೋಗ ಸಂಶೋಧನೆ ಹಾಗೂ ಕಣ್ಗಾವಲು, - ಲಸಿಕೆ ಅಭಿವೃದ್ಧಿ, - ಒಂದು ಆರೋಗ್ಯ, - ಝೋಓನೋಟಿಕ್ ಮತ್ತು ವೆಕ್ಟರ್-ಹರಡುವ ರೋಗಗಳು, - ಆರೋಗ್ಯ ವ್ಯವಸ್ಥೆಗಳು ಮತ್ತು ಆರೋಗ್ಯ ನೀತಿಗಳು. * ಭಾರತ-ಅಮೇರಿಕ ರಾಷ್ಟ್ರಗಳ ಪ್ರಮುಖ ಕ್ಷೇತ್ರಗಳಲ್ಲಿನ ಆರೋಗ್ಯ ಸುರಕ್ಷತೆ ಹಾಗೂ ಭದ್ರತೆ ಒಳಗೊಂಡ ಸಭೆ ಇದಾಗಿದೆ, ಇದಲ್ಲದೇ ಆರೋಗ್ಯ ನೀತಿ ಮತ್ತು ಆರೋಗ್ಯ ವ್ಯವಸ್ಥೆಗಳು ಒಳಗೊಂಡ ಸಭೆಯಾಗಿದೆ ಎಂದು ತಿಳಿಸಿದ್ದಾರೆ.