Job Description: * ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾಗಿರುವ ಹರ್ದೀಪ್ ಸಿಂಗ್ ಪುರಿ ಅವರು ನವದೆಹಲಿಯಲ್ಲಿ 7ನೇ ಆವೃತ್ತಿಯ ಸ್ವಚ್ಛ ಸರ್ವೇಕ್ಷಣೆಯ ಕಾರ್ಯಕ್ರಮವನ್ನು ಆರಂಭಿಸಿದರು. * ಈ ಸ್ವಚ್ಛ ಭಾರತ್ ಮಿಷನ್ ವಿಶ್ವದ ಅತಿದೊಡ್ಡ ನಗರಗಳ ಸ್ವಚ್ಛತಾ ಸಮೀಕ್ಷೆಯಾಗಿದೆ, ಇದನ್ನು ಎಂಬ 'ಪೀಪಲ್ ಫಸ್ಟ್' ಎಂಬ ಚಾಲನಾ ತತ್ವದಿಂದ ಅಭಿವೃದ್ಧಿ ಪಡಿಸಲಾಗಿದೆ. * ಸ್ವಚ್ಛ ಸರ್ವೇಕ್ಷಣೆಯನ್ನು ಈ ಮೊದಲು ನೈರ್ಮಲ್ಯ ಕಾರ್ಮಿಕರ ಕಲ್ಯಾಣ ಹಾಗೂ ಯೋಗಕ್ಷೇಮಕ್ಕಾಗಿ ನಗರಗಳ ಉಪಕ್ರಮಗಳ ಅಡಿಯಲ್ಲಿ ಆರಂಭಿಸಲಾಗಿದೆ. * ಸ್ವಚ್ಛ ಸಮೀಕ್ಷೆ 2022 ರ ಆವೃತ್ತಿಯು ನಗರ ನೈರ್ಮಲ್ಯದಲ್ಲಿನ ಕೆಲಸಗಾರರಿಗೆ ಜೀವನೋಪಾಯದ ಅವಕಾಶಗಳನ್ನು ಬದಲಾವಣೆ ಮಾಡಿಕೊಳ್ಳಲು ನಗರಗಳನ್ನು ಪ್ರೇರೇಪಿಸುತ್ತದೆ. * ಸ್ವಚ್ಛ ಸರ್ವೇಕ್ಷಣೆ ಇದು ಭಾರತದ ನಗರಗಳು ಮತ್ತು ಪಟ್ಟಣಗಳಲ್ಲಿ ಸ್ವಚ್ಛತೆ, ನೈರ್ಮಲ್ಯದ ವಾರ್ಷಿಕ ಸಮೀಕ್ಷೆಯಾಗಿದೆ, ಈ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯನ್ನು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಆರಂಭಿಸಲಾಗಿದೆ. * ಪ್ರಸ್ತುತ ಈ ಮೊದಲ 2016 ರಲ್ಲಿ 73 ನಗರಗಳನ್ನು ಸೇರಿದಂತೆ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು, ಹಾಗೂ 2020 ರ ಅವಧಿಗೆ ಅಂದಾಜು 4242 ನಗರಗಳನ್ನು ಸೇರಿದಂತೆ ಸಮೀಕ್ಷೆಯನ್ನು ನಡೆಸಲಾಗಿದೆ.