Job Description: * ಪ್ರಧಾನ್ ಮಂತ್ರಿ ನರೇಂದ್ರ ಮೋದಿ ಅವರು 'ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್'ಗೆ ಚಾಲನೆಯನ್ನು ನೀಡಿದ್ದಾರೆ. * ಈ ಆರೋಗ್ಯ ಅಭಿಯಾನವನ್ನು ಕಳೆದ 7 ವರ್ಷಗಳ ಹಿಂದೆ ಆರಂಭಿಸಲಾಗಿತ್ತು, ಇದೀಗ ಮೋದಿ ಅವರ ಈ ಅಭಿಯಾನದ ಚಾಲನೆಯು 'ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್'ಗೆ ಉತ್ತೇಜನ ನೀಡಿದಂತಾಗಿದೆ, ಹಾಗೂ ಭಾರತೀಯ ಜನರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಿ ಶಕ್ತಿಯನ್ನು ನೀಡಲಿದೆ ಎಂದು ತಿಳಿಸಿದ್ದಾರೆ. * ಈ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯಡಿಲ್ಲಿ ಪ್ರತಿ ಭಾರತೀಯ ಪ್ರಜೆಗೂ ಡಿಜಿಟಲ್ ಆರೋಗ್ಯ ಐಡಿ ನೀಡಲಾಗುತ್ತದೆ, ಅಷ್ಟೇ ಅಲ್ಲದೇ ಪ್ರತಿ ನಾಗರಿಕನಿಗೂ ಆರೋಗ್ಯ ದಾಖಲೆಗಳನ್ನೂ ಡಿಜಿಟಲ್ ವ್ಯವಸ್ಥೆಯಡಿ ರಕ್ಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ಹಿಂದೆ 3 ವರ್ಷಗಳ ಹಿಂದೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ಆಯುಷ್ಮಾನ್ ಯೋಜನೆಯನ್ನ ಪ್ರಾರಂಭಿಸಲಾಗಿದೆ. * ಪ್ರಸ್ತುತ ಕೊರೊನಾ(ಕೋವಿಡ್-19) ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಆರೋಗ್ಯ ಸೇತು ಆಯಪ್'ನ್ನು ಆರಂಭಿಸಿದೆ, ಅಷ್ಟೇ ಅಲ್ಲದೇ 90 ಕೋಟಿ ಡೋಸ್ ವ್ಯಾಕ್ಸಿನೇಷನ್'ನ್ನು ಉಚಿತ ಲಸಿಕೆ ಅಭಿಯಾನದ ಅಡಿಯಲ್ಲಿ ಭಾರತವು ಪೂರೈಸಿದೆ ಎಂದು ತಿಳಿಸಿದೆ.