Job Description: * ಪ್ರಸ್ತುತ ವಿಶ್ವದ ಅತೀ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ಹಿಮಾಚಲ ಪ್ರದೇಶದ ಲಾಹೌಲ್ ಹಾಗೂ ಸ್ಪಿತಿ ಜಿಲ್ಲೆಯ ಕಾಜಾದಲ್ಲಿ ಆರಂಭಿಸಲಾಗಿದೆ, ಈ ಪ್ರದೇಶವು ಸಮುದ್ರ ಮಟ್ಟದಿಂದ 12,500 ಅಡಿ ಎತ್ತರದಲ್ಲಿದೆ. * ಪ್ರಸ್ತುತ ಲಾಹೌಲ್ ಹಾಗೂ ಸ್ಪಿತಿ ಜಿಲ್ಲೆ ಕಾಜಾದಲ್ಲಿನ ಈ ಚಾರ್ಜಿಂಗ್ ಕೇಂದ್ರವು ವಿಶ್ವದ ಅತೀ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವಾಗಿದೆ ಎಂದು ಕಾಜಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ರಾಗಿರುವ ಮಹೇಂದ್ರ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ, ಅಲ್ಲದೇ ಈ ಚಾರ್ಜಿಂಗ್ ಕೇಂದ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಇನ್ನು ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳನ್ನೂ ಸ್ಥಾಪನೆ ಮಾಡಲಾಗುವದು ಎಂದು ತಿಳಿಸಿದ್ದಾರೆ. * ಪ್ರಸ್ತುತ ವಾಹನಗಳು ಹೊರಸೂಸುವ ಅನಿಲದಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ, ಈ ಕಾರಣದಿಂದಾಗಿ, ಚಾರ್ಜಿಂಗ್ ಕೇಂದ್ರಗಳನ್ನೂ ಆರಂಭಿಸಲಾಗುತ್ತಿದೆ, ಇವುಗಳಿಂದ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಮಹೇಂದ್ರ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.