Job Description: * 2021 ರ ಸೆಪ್ಟೆಂಬರ್. 27 ರಂದು ಪ್ರಧಾನ ಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್ (PM-DHM)ನ್ನು ದೇಶಾದ್ಯಂತ ಬಿಡುಗಡೆ ಮಾಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ * ಪ್ರಸ್ತುತ ಭಾರತದಲ್ಲಿನ ಆರೋಗ್ಯ ವಿತರಣೆಯ ದಕ್ಷತೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪ್ರಧಾನ ಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸಲಾಗುವದು. * ಈ ಮಿಷನ್ ಆರೋಗ್ಯ ವೈದ್ಯರು ಹಾಗೂ ಆರೋಗ್ಯ ಸೌಲಭ್ಯಗಳಿಗಾಗಿ ಟೆಲಿಮೆಡಿಸಿನ್ ಹಾಗೂ ಇ-ಫಾರ್ಮಸಿ, ವೈಯಕ್ತಿಕ ಆರೋಗ್ಯ ದಾಖಲೆಗಳುನ್ನು ಒದಗಿಸಲಿದೆ, ರೋಗಿಗಳಿಗೆ ತಮ್ಮ ಆರೋಗ್ಯ ದಾಖಲೆಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ಹಂಚಿಕೊಳ್ಳಲು ಸಹಾಯ ಮಾಡಲಿದೆ. * ಈ ಡಿಜಿಟಲ್ ಆರೋಗ್ಯ ID ಪ್ರತಿಯೊಬ್ಬ ವ್ಯಕ್ತಿಯ ಎಲ್ಲಾ ಆರೋಗ್ಯ ದಾಖಲೆಗಳ ಮಾಹಿತಿಯನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ, ಇದನ್ನು ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಸಹಾಯದಿಂದ ರಚಿಸಲಾಗುತ್ತದೆ ಎಂದಿದ್ದಾರೆ. * ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಲಕ್ಷದ್ವೀಪ, ಚಂಡೀಗಢ, ಲಡಾಖ್ ಹಾಗೂ ಪುದುಚೇರಿಯಲ್ಲಿ ಈ ಮಿಷನ್ ಪ್ರಾಯೋಗಿಕ ಹಂತದಲ್ಲಿದೆ ಎಂದು ತಿಳಿದು ಬಂದಿದೆ.