Job Description: * ಭಾರತೀಯ ರಕ್ಷಣಾ ಸಚಿವಾಲಯ ಭೂಸೇನೆಗೆ 7,523 ಕೋಟಿ ರೂ. ಮೌಲ್ಯದ 118 ಯುದ್ಧ ಟ್ಯಾಂಕ್ಗಳ ಖರೀದಿಗೆ ಒಪ್ಪಿಗೆಯನ್ನು ನೀಡಿದೆ. * ಪ್ರಸ್ತುತ ತಮಿಳನಾಡು ಚೆನ್ನೈನ ಆವಡಿಯಲ್ಲಿರುವ ಹೆವಿ ವೆಹಿಕಲ್ ಫ್ಯಾಕ್ಟರಿಯಲ್ಲಿ ಅರ್ಜುನ ಎಂಕೆ-1ಎ ಯುದ್ಧ ಟ್ಯಾಂಕ್ಗಳನ್ನು ನಿರ್ಮಿಸಲಾಗುತ್ತಿದೆ, ಈ ಹೊಸ ಮಾದರಿಯ ಟ್ಯಾಂಕ್, ಪ್ರಸ್ತುತ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಜುನ ಟ್ಯಾಂಕ್ನ ಮುಂದಿನ ಆವೃತ್ತಿಯಾಗಿದೆ. * ಭಾರತೀಯ 'ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಹೊಸ ಮಾದರಿಯ ಅರ್ಜುನ ಟ್ಯಾಂಕ್ಗಳ ನಿರ್ಮಾಣದ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.