Job Description: * ಪ್ರಸ್ತುತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಪರಿಸ್ಥಿತಿಯ ಕುರಿತು ನಕ್ಸಲ್ ಬಾಧಿತ 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದರು. * ನಕ್ಸಲ್ ಬಾಧಿತ 6 ರಾಜ್ಯಗಳ ಮುಖ್ಯಮಂತ್ರಿಗಳು: ನವೀನ್ ಪಟ್ನಾಯಕ್, ಒಡಿಶಾ ರಾಜ್ಯ, ಕೆ.ಚಂದ್ರಶೇಖರ ರಾವ್, ತೆಲಂಗಾಣ ರಾಜ್ಯ, ನಿತೀಶ್ ಕುಮಾರ್, ಬಿಹಾರ ರಾಜ್ಯ, ಶಿವರಾಜ ಸಿಂಗ್ ಚೌಹಾಣ್, ಮಧ್ಯಪ್ರದೇಶ ರಾಜ್ಯ, ಉದ್ಧವ್ ಠಾಕ್ರೆ, ಮಹಾರಾಷ್ಟ್ರ ರಾಜ್ಯ, ಹೇಮಂತ್ ಸೊರೆನ್, ಜಾರ್ಖಂಡ್ ರಾಜ್ಯ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆಯನ್ನು ನಡೆಸಿದ್ದಾರೆ. * ಇವರಷ್ಟೇ ಅಲ್ಲದೇ ಪಶ್ಚಿಮ ಬಂಗಾಳ, ಛತ್ತೀಸಗಡ, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಉನ್ನತ ಅಧಿಕಾರಿಗಳು ಈ ಚರ್ಚೆಯಲ್ಲಿ ಭಾಗಿಯಾಗಿದ್ದರು. * ಅಮಿತ್ ಶಾ ಅವರು ನಡೆಸಿರುವ ಈ ಸಭೆಯಲ್ಲಿ ಈ 6ರಾಜ್ಯಗಳಲ್ಲಿನ ಭದ್ರತಾ ಪರಿಸ್ಥಿತಿ, ಹಾಗೂ ರಾಜ್ಯಗಳ ರಸ್ತೆ, ಸೇತುವೆ, ಶಾಲೆ, ಆರೋಗ್ಯ ಕೇಂದ್ರಗಳ ನಿರ್ಮಾಣದ ಕಾರ್ಯಗಳ ಬಗ್ಗೆಯು ಚರ್ಚಿಸಿದರು. * 2015 ರಿಂದ 2020 ರ ನಡುವೆ ನಕ್ಸಲ್ ಬಾಧಿತ ಜಿಲ್ಲೆಗಳಲ್ಲಿ ನಡೆದಿರುವ ಕೃತ್ಯಗಳಲ್ಲಿ 380 ಭದ್ರತಾ ಸಿಬ್ಬಂದಿ, 1000 ನಾಗರಿಕರು, ಅಷ್ಟೇ ಅಲ್ಲದೇ 900 ಜನ ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.