Job Description: * ಪ್ರಸ್ತುತ ಬೈಕ್ ತಯಾರಿಕೆ ಕಂಪನಿ 'ಹಾರ್ಲೆ ಡೇವಿಡ್ಸನ್' ನೂರು ವರ್ಷಗಳ ಹಳೆಯ ವಿನ್ಯಾಸದ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಸಿಕಲ್ಗಳನ್ನೂ ಈ ವರ್ಷದ ಕೊನೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ. * 'ಹಾರ್ಲೆ ಡೇವಿಡ್ಸನ್' ಅಮೇರಿಕದ ಸ್ಯಾನ್ಫ್ರಾನ್ಸಿಸ್ಕೋ ಮೂಲದ ಮೋಟಾರ್ ಬೈಕ್ ತಯಾರಿಕ ಕಂಪನಿಯಾಗಿದೆ. * 'ಹಾರ್ಲೆ ಡೇವಿಡ್ಸನ್' ಮೋಟಾರ್ ಬೈಕ್ ತಯಾರಿಕ ಕಂಪನಿಯು ಈ ಹಿಂದೆ 1903 ರಲ್ಲಿ "ಸೀರಿಯಲ್ 1" ಎಂಬ ಮೋಟಾರ್ ಸೈಕಲ್ ತಯಾರಿಸಿತ್ತು, ಇದೀಗ ಮತ್ತೆದೇ ವಿನ್ಯಾಸದ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿ ಪಡಿಸಿದೆ. * 'ಹಾರ್ಲೆ ಡೇವಿಡ್ಸನ್' ಮೋಟಾರ್ ಬೈಕ್ ತಯಾರಿಕ ಕಂಪನಿಯು ಪ್ರಾರಂಭದಲ್ಲಿ 650 ಎಲೆಕ್ಟ್ರಿಕ್ ಸೈಕಲ್ಗಳನ್ನು ಉತ್ಪಾದಿಸಿ ಅಮೆರಿಕ ಹಾಗೂ ಯುರೋಪ್ ಮಾರುಕಟ್ಟೆಗೆ ಬಿಡುವ ಉದ್ದೇಶವನ್ನು ಹೊಂದಿದೆ, ಮುಂದಿನ 10 ವರ್ಷಗಳಲ್ಲಿ ಇನ್ನ ಉಳಿದ ರಾಷ್ಟ್ರಗಳ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಕಂಪನಿಯ ಮುಖ್ಯಸ್ಥ ಏರನ್ ಫ್ರಾಂಕ್ ಅವರು ತಿಳಿಸಿದ್ದಾರೆ. * ಪ್ರಸ್ತುತ 'ಹಾರ್ಲೆ ಡೇವಿಡ್ಸನ್' ಅಷ್ಟೇ ಅಲ್ಲದೇ ಬಿಎಂಡಬ್ಲೂ(BMW), ಆಡಿ(AUDI) 'ಮರ್ಸಿಡೀಸ್ ಬೆಂಜ್' ನಂತಹ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಸಿದ್ದ ಪಡಿಸುತ್ತಿವೆ, ಆದರೆ ಫೋರ್ಡ್ ಕಂಪನಿ ಇ-ಸ್ಕೂಟರ್ ತಯಾರಿಸಲು 'ಸ್ಪಿನ್' ಎಂಬ ಸ್ಟಾರ್ಟ್ಅಪ್ ಕಂಪನಿಯನ್ನು ಖರೀದಿಸಿದೆ.