Job Description: * ಈ ಮೊದಲು ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ದೇಶಗಳ ನಡುವೆ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಒಪ್ಪಂದವಾಗಿತ್ತು, ಇದೀಗ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಆ ಒಪ್ಪಂದವನ್ನು ರದ್ದುಗೊಂಡಿದೆ ಎಂದು ತಿಳಿದು ಬಂದಿದೆ. * ಆಸ್ಟ್ರೇಲಿಯಾ ರಾಷ್ಟ್ರವು ಅಮೇರಿಕ ಮತ್ತು ಬ್ರಿಟನ್ ದೇಶಗಳ ಜೊತೆಗೆ ಹೊಸ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ, ಈ ಮೊದಲು ಫ್ರಾನ್ಸ್ನೊಂದಿಗೆ ಮಾಡಿಕೊಂಡಿರುವ ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದವನ್ನು ರದ್ದುಪಡಿಸಿದೆ. * ಈ ಒಪ್ಪಂದಆಗಿರುವ ಹಿನ್ನಲೆಯಿಂದಾಗಿ ಫ್ರಾನ್ಸ್ ದೇಶವು ಅಮೇರಿಕ ಮತ್ತು ಆಸ್ಟ್ರೇಲಿಯಾದಲ್ಲಿರುವ ತನ್ನ ದೇಶದ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡು ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. * ಆಸ್ಟ್ರೇಲಿಯಾ ರಾಷ್ಟ್ರವು 12 ಸಾಂಪ್ರದಾಯಿಕ ಡೀಸೆಲ್ ಚಾಲಿತ ಜಲಾಂತರ್ಗಾಮಿ ನೌಕೆ ಖರೀದಿಗೆ ಫ್ರಾನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು, ಈ ಒಪ್ಪಂದ 5 ಲಕ್ಷ ಕೋಟಿಯ ವ್ಯವಹಾರವಾಗಿತ್ತು. * ಪ್ರಸ್ತುತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಆಸ್ಟ್ರೇಲಿಯಾ ಮತ್ತು ಬ್ರಿಟನ್ ಜೊತೆಗೆ ಇತ್ತೀಚೆಗೆ ಹೊಸ ಮೈತ್ರಿಕೂಟವನ್ನು ಘೋಷಣೆ ಮಾಡಿದ್ದರು ಈ ಸಂಧರ್ಭದಲ್ಲಿ ಅಣು ಇಂಧನ ಚಾಲಿತ 8 ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾದ ನೌಕಾಪಡೆಗೆ ಒದಗಿಸುವದಾಗಿ ಹೇಳಿತ್ತು ಈ ಕಾರಣದಿಂದಾಗಿ ಆಸ್ಟ್ರೇಲಿಯಾ ಫ್ರಾನ್ಸ್ ಜೊತೆಗಿನ ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದವನ್ನು ರದ್ದು ಪಡಿಸಿದೆ ಎನ್ನಲಾಗಿದೆ.