Job Description: * ಪ್ರಸ್ತುತ ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಚರಣ್ಜಿತ್ ಸಿಂಗ್ ಚನ್ನಿ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. * ಚರಣಜಿತ್ ಸಿಂಗ್ ಚನ್ನಿ ಒಬ್ಬ ಭಾರತೀಯ ರಾಜಕಾರಣಿ ಹಾಗೂ ಪ್ರಸ್ತುತ ಪಂಜಾಬ್ ಸಿಎಂಆಗಿದ್ದಾರೆ, ಸದ್ಯ ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. * ಈ ಹಿಂದೆ 2018ರಲ್ಲಿ ಚರಣ್ಜಿತ್ ಸಿಂಗ್ ಚನ್ನಿ ಅವರ ವಿರುದ್ಧ ಐಎಎಸ್ ಮಹಿಳಾ ಅಧಿಕಾರಿಗೆ ಅಶ್ಲೀಲ ಸಂದೇಶ ಕಳುಸಿರುವ ಹಿನ್ನಲೆಯಿಂದಾಗಿ ಇವರ ಮೇಲೆ ಮೀಟೂ ಆರೋಪವಿದೆ ಎಂದು ತಿಳಿದು ಬಂದಿದೆ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಪಂಜಾಬ್'ನ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟಿ ಅವರು ತಿಳಿಸಿದ್ದಾರೆ.