Job Description: * ಪ್ರಸ್ತುತ ಸೆಪ್ಟೆಂಬರ್. 10ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಣೆ ಮಾಡಲಾಯಿತು, ಈ ದಿನವನ್ನು ಆತ್ಮಹತ್ಯೆಯನ್ನು ತಡೆಗಟ್ಟಲು ವಿವಿಧ ಮಾರ್ಗಗಳನ್ನು ತೋರಿಸುವ ಸಲುವಾಗಿ ವಾರ್ಷಿಕವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. * 2003 ರ ಸೆಪ್ಟೆಂಬರ್. 10 ರಂದು ವಿಶ್ವ ಆರೋಗ್ಯ ಸಂಸ್ಥೆ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆಯ ಉಪಕ್ರಮವಾಗಿ ಈ ದಿನವನ್ನು ಪರಿಗಣಿಸಲಾಗಿದೆ, ಹಾಗೂ ಆತ್ಮಹತ್ಯೆಗಳನ್ನು ತಡೆಯಬಹುದು ಎಂಬ ಪ್ರಮುಖ ಸಂದೇಶವನ್ನು ಸಾರಲು ಈ ದಿನವನ್ನು ರಚಿಸಲಾಗಿದೆ. * 2011 ರ ಸಂದರ್ಭದಲ್ಲಿ ಈ ದಿನವನ್ನು ಗುರುತಿಸಲು ಸುಮಾರು 40 ದೇಶಗಳು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. * ಪ್ರಸ್ತುತ ಉದ್ದೇಶಪೂರ್ವಕವಾಗಿ ಜೀವ ತೆಗೆಯುವ ಕ್ರಿಯೆಗೆ ಆತ್ಮಹತ್ಯೆ ಎನ್ನುತ್ತಾರೆ. * ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಸಂಘ (IASP) ಇದು ಒಂದು ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆಯಾಗಿದೆ, ಹಾಗೂ ಈ ಸಂಸ್ಥೆಯನ್ನು 1960 ರಲ್ಲಿ ಎರ್ವಿನ್ ರಿಂಗಲ್ ಮತ್ತು ನಾರ್ಮನ್ ಫಾರ್ಬೆರೋವ್ ಅವರು ಸ್ಥಾಪನೆ ಮಾಡಿದ್ದಾರೆ. * ಪ್ರಸ್ತುತ ಈ ಸಂಸ್ಥೆಯು 50 ದೇಶಗಳ ವೃತ್ತಿಪರರು ಹಾಗೂ ಸ್ವಯಂಸೇವಕರನ್ನು ಹೊಂದಿದೆ.