Job Description: * 2021 ರ ಸೆಪ್ಟೆಂಬರ್. 4 ರಂದು ಭಾರತ ಸರ್ಕಾರ, ಹಾಗೂ ಅಸ್ಸಾಂ ಸರ್ಕಾರ ಮತ್ತು ಕಾರ್ಬಿಯ 6 ಬಣಗಳ ನಡುವೆ ಈ ಐತಿಹಾಸಿಕ ತ್ರಿಪಕ್ಷೀಯ ಕಾರ್ಬಿ ಆಂಗ್ಲಾಂಗ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. * ಈ ಕಾರ್ಬಿ ಆಂಗ್ಲಾಂಗ್ ಒಪ್ಪಂದದ ಪ್ರಕಾರ, ಸಶಸ್ತ್ರ ಗುಂಪುಗಳು ತಮ್ಮ ಹಿಂಸೆಯ ಹಾದಿಯನ್ನು ಬಿಡಬೇಕು, ಅಲ್ಲದೇ ಅವರ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕು ಹಾಗೂ ಈ ಕಾರ್ಬಿ ಆಂಗ್ಲಾಂಗ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಒಂದು ತಿಂಗಳೊಳಗೆ ತಮ್ಮ ಸಂಸ್ಥೆಗಳನ್ನು ವಿಸರ್ಜಿಸಬೇಕು ಎಂದು ಈ ಒಪ್ಪಂದದಲ್ಲಿ ತಿಳಿಸಲಾಗಿದೆ. * ಈ ಒಪ್ಪಂದದ ಪ್ರಕಾರ ಅಸ್ಸಾಂ ಸರ್ಕಾರವು ಕಾರ್ಬಿಯನ್ನು ಕೆಎಎಸಿಯ ಅಧಿಕೃತ ಭಾಷೆಯಾಗಿ ಸೂಚಿಸಲು ಕಾರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿಯ ಪ್ರಸ್ತಾಪವನ್ನು ಪರಿಗಣಿಸುತ್ತದೆ ಎಂದು ತಿಳಿಸಿದೆ, ಹಾಗೂ ಇಂಗ್ಲಿಷ್, ಹಿಂದಿ ಮತ್ತು ಅಸ್ಸಾಮೀಸ್ ಅಧಿಕೃತ ಭಾಷೆಗಳಾಗಿ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದೆ. * ಭಾರತ ಸರ್ಕಾರವು ಕೆಎಎಸಿ ಅಭಿವೃದ್ಧಿಗೆ 500 ಕೋಟಿ ರೂ. ಬಳಕೆಮಾಡಲಿದೆ, ಅಲ್ಲದೇ ಕಾರ್ಬಿ ಯುವಕರನ್ನು ಅಸ್ಸಾಂ ಸರ್ಕಾರದ ಸೇನೆ, ಅರೆಸೇನಾ ಪಡೆಗಳು ಮತ್ತು ಪೋಲಿಸ್ ಹುದ್ದೆಗಳಿಗೆ ನೇಮಿಸಿಕೊಳ್ಳಲು ಕಾರ್ಯಾಚರಣೆಯನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದೆ.