Job Description: * ಪ್ರಸ್ತುತ ಜಗತ್ತಿನಾದ್ಯಂತ ಇರುವ ಇಸ್ಕಾನ್ ದೇವಾಲಯಗಳು ತಮ್ಮ ಮೂಲಕ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸುತ್ತಿವೆ, ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. * ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ 125 ರೂ. ಮೌಲ್ಯದ ಬೆಳ್ಳಿ ನಾಣ್ಯಗಳನ್ನು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆಯ (ಇಸ್ಕಾನ್) ಸಂಸ್ಥಾಪಕರಾದ ಶ್ರೀ ಶ್ರೀಮದ್ ಭಕ್ತಿವೇದಾಂತ ಪ್ರಭುಪಾದರ 125 ನೇ ಜನ್ಮದಿನೋತ್ಸವದ ಸ್ಮರಣೆಗಾಗಿ ಬಿಡುಗಡೆ ಮಾಡಿದೆ. * ಇಸ್ಕಾನ್ ಸಂಸ್ಥೆಯು ಭಾರತೀಯ ಸಮಾಜಕ್ಕಾಗಿ ನೀಡಿದ ಅಪಾರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿಸಿಕೊಳ್ಳುತ್ತಾ, ಈ ಹಿಂದೆ 2001 ರಲ್ಲಿ ಕಛ್ ನಲ್ಲಿ ಭೂಕಂಪವಾದಾಗ ಸಂದರ್ಭದಲ್ಲಿ ಉತ್ತರಾಖಾಂಡ, ಒಡಿಶಾ, ಪಶ್ಚಿಮ ಬಂಗಾಳಗಳಲ್ಲಿ ನೈಸರ್ಗಿಕ ವಿಕೋಪಗಳಿಗೆ ತುತ್ತಾದಾಗ ಈ ಎಲ್ಲ ಪ್ರದೇಶಗಳಿಗೆ ಇಸ್ಕಾನ್ ಸಂಸ್ಥೆಯು ಅಪಾರವಾದ ಸೇವೆಯನ್ನು ನೀಡಿದೆ ಎಂದು ತಿಳಿಸಿದರು.