Job Description: * ಟರ್ಕಿ ರಾಷ್ಟ್ರವು ತಾಲಿಬಾನ್ ಗಳೊಂದಿಗೆ ಕಾಬೂಲ್ ನಲ್ಲಿ ಮೊದಲ ಮಾತುಕತೆಯನ್ನು ನಡೆಸಿದೆ, ಈ ಮಾತುಕತೆಯಲ್ಲಿ ತಾಲಿಬಾನ್ಗಳು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ನೆರವಾಗಬೇಕು ಎಂದು ಟರ್ಕಿ ದೇಶದ ಮುಂದೆ ಕೋರಿಕೆಯನ್ನು ಇಟ್ಟಿವೆ, ಸದ್ಯ ಇದನ್ನು ಟರ್ಕಿ ದೇಶವು ಪರಿಶೀಲಿಸುತ್ತಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗನ್ ಅವರು ತಿಳಿಸಿದ್ದಾರೆ. * ಟರ್ಕಿ-ತಾಲಿಬಾನ್ ನಡುವಿನ ಈ ಮಾತುಕತೆ ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಸೇನಾ ನೆಲೆಯಲ್ಲಿ ನಡೆದಿದೆ, ಹಾಗೂ ಕಾಬೂಲ್ ನಲ್ಲಿ ಟರ್ಕಿಯ ತಾತ್ಕಾಲಿಕ ರಾಯಭಾರಿ ಕಚೇರಿಯನ್ನೂ ತರೆದಿದೆ. * ಪ್ರಸ್ತುತ ಟರ್ಕಿ ದೇಶವು ತನ್ನ ಮಿಲಿಟರಿ ಪಡೆಯನ್ನು ಕಾಬೂಲ್ ವಿಮಾನ ನಿಲ್ದಾಣದ ಭದ್ರತೆ ಹಾಗೂ ನಿರ್ವಹಣೆಗಾಗಿ ಆಫ್ಘಾನಿಸ್ತಾನದಲ್ಲೇ ಇರಿಸಲಾಗುವದು, ಆದರೆ ಸದ್ಯ ಯಾವುದೇ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಟರ್ಕಿ ಅಧ್ಯಕ್ಷ ಎರ್ದೊಗನ್ ತಿಳಿಸಿದ್ದಾರೆ. * ನೇಟೊ ಸದಸ್ಯನಾಗಿರುವ ಟರ್ಕಿ ದೇಶದ ಸೈನಿಕರು ಸುಮಾರು '6' ವರ್ಷಗಳಿಂದ ಅಫ್ಘಾನ್ ವಿಮಾನ ನಿಲ್ದಾಣಗಳ ಭದ್ರತಾ ಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಂಡು ನಿರ್ವಹಿಸುತ್ತಿದ್ದರು.