Job Description: * ಪ್ರಸ್ತುತ ಜಪಾನ್ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಸುಮಿತ್ ಅಂತಿಲ್ ಅವರು ಚಿನ್ನದ ಪದಕವನ್ನು ಜಯಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. * ಪ್ರಸ್ತುತ ಇದೇ ವರ್ಷದಲ್ಲಿ ಭಾರತಕ್ಕೆ ಒಲಿದು ಬಂದ 2 ನೇ ಚಿನ್ನದ ಪದಕವಾಗಿದೆ, ಹಾಗೂ ಇದಲ್ಲದೇ ಮಹಿಳಾ SH1 ವಿಭಾಗದ 10 ಮೀ. ಏರ್ ರೈಫಲ್ ಸ್ಟ್ಯಾಂಡಿಂಗ್ ನಲ್ಲಿ ಅವನಿ ಲೇಖರಾ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. * ಸುಮಿತ್ ಅಂತಿಲ್ ಅವರು 68.55 ಮೀ. ದೂರ ಜಾವೆಲಿನ್ ಎಸೆದು ವಿಶ್ವದಾಖಲೆಯನ್ನು ಬರೆದಿದ್ದಾರೆ. * ಆಸ್ಟ್ರೇಲಿಯಾದ ಮಿಚಲ್ ಬುರೇನ್ ಅವರು 66.29 ಮೀ. ಜಾವೆಲಿನ್ ಎಸೆದು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಶ್ರೀಲಂಕಾದ ದುಲಾನ್ ಕೊಡಿಥುವಕ್ಕು ಅವರು 65.61 ಮೀ. ಜಾವೆಲಿನ್ ಎಸೆದು ಕಂಚಿನ ಪದಕವನ್ನು ಜಯಿಸಿಕೊಂಡಿದ್ದಾರೆ. * ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕತುನಿಯಾ ಅವರು ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. * ದೇವೇಂದ್ರ ಜಝಾರಿಯಾ ಅವರು ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಸುಂದರ್ ಸಿಂಗ್ ಗುರ್ಜ್ಜಾರ್ ಅವರು ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. * ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಅನೇಕರು ಅಭಿನಂದನೆಗಳನ್ನೂ ತಿಳಿಸಿದ್ದಾರೆ.