Job Description: * ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸದ್ಯದ ಪರಿಸ್ಥಿತಿಯಲ್ಲಿ ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಗಮನಿಸಲು ಹಾಗೂ ಅಲ್ಲಿನ ಸಾಮಾನ್ಯ ಜನರಿಗೆ ನೆರವು ನೀಡುವ ಬಗ್ಗೆ ಚೆರ್ಚೆ ಮಾಡುವದಕ್ಕಾಗಿ ಜಿ7 ರಾಷ್ಟ್ರಗಳ ನಾಯಕರ ಸಭೆಯನ್ನು ಕರೆದಿದ್ದಾರೆ. * ಈ ಜಿ7 ರಾಷ್ಟ್ರಗಳ ನಾಯಕರ ಸಭೆಯು (ವರ್ಚುವಲ್) ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ, ಸುಮಾರು 20 ಸಾವಿರ ಅಫ್ಗಾನ್ ನಿರ್ಗತಿಕರನ್ನು ಬೇರೆ ಕಡೆಗೆ ಸ್ಥಳಾಂತರಿಸುವುದು ಹಾಗೂ ಸಂಕಷ್ಟದಲ್ಲಿರುವವರ ಸಲುವಾಗಿ ಅಂದಾಜು 392 ಮಿಲಿಯನ್ ಡಾಲರ್ ಮಾನವೀಯ ನೆರವು ನೀಡುವ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. * ಸಭೆಯ ಅಧ್ಯಕ್ಷತೆ ಬ್ರಿಟನ್ ಪ್ರಧಾನಿ ವಹಿಸಿಕೊಳ್ಳಲಿದ್ದಾರೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.