Job Description: * ಪ್ರಸ್ತುತ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಮೆಟ್ರೊ ನಿಯೊ ಹಾಗೂ ಮೆಟ್ರೊ ಲೈಟ್ ಯೋಜನೆಯನ್ನು ಜಾರಿಗೊಳಿಸುವ ವಿಷಯದ ಸಮೀಕ್ಷೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ. * ದಕ್ಷಿಣ ಭಾರತದಲ್ಲೇ ಮೊದಲ ನಗರವು ಈ ಯೋಜನೆಗೆ ಸಮೀಕ್ಷೆ ನಡೆಸಲು ಮುಂದಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಮಾಹಿತಿ ನೀಡಿದ್ದಾರೆ. * ಈ ಯೋಜನೆಯಗೆ ಕೇಂದ್ರ ಸರ್ಕಾರವು 18 ಸಾವಿರ ಕೋಟಿ ರೂ. ಮೀಸಲಿಟ್ಟಿದೆ, ಹಾಗೂ ಶೇ 80 ರಷ್ಟು ಹಣ ಕೇಂದ್ರದಿಂದ ಶೇ 10 ರಷ್ಟು ರಾಜ್ಯ ಸರ್ಕಾರ, ಇನ್ನ ಉಳಿದ ಶೇ 10 ರಷ್ಟು ಹಣ ಮಾತ್ರ ನಗರ ಪ್ರಾಧಿಕಾರವು ಭರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. * ಮೆಟ್ರೊ ನಿಯೊ ಯೋಜನೆಯ ಅಡಿಯಲ್ಲಿ 18 ರಿಂದ 25 ಮೀ. ಉದ್ದದ ಬಸ್ಗಳು ಮೆಟ್ರೊ ಟೈಯರ್ ಮೂಲಕ ಸೇತುವೆ ಮೇಲೆ ಸಂಚರಿಸಲಿವೆ, ಪ್ರಸ್ತುತ ಮೈಸೂರ್ ನಗರವಲ್ಲದೇ ಗುಜರಾತ್ ಮತ್ತು ನಾಸಿಕ್'ನಲ್ಲಿ ಈ ಯೋಜನೆ ಕುರಿತು ಸಮೀಕ್ಷಾ ವರದಿಯುನ್ನು ಆ ರಾಜ್ಯಗಳು ಸಿದ್ಧಪಡಿಸುತ್ತಿವೆ ಎಂದು ತಿಳಿದು ಬಂದಿದೆ.