Job Description: * ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ (ISRO) ಭೂಮಿಯ ಪರಿವೀಕ್ಷಣೆ EOS-3 ಉಪಗ್ರಹವು ಬಾಹ್ಯಾಕಾಶದ ಭೂ ವಾತಾವರಣವನ್ನು ದಾಟಿ ಮೇಲೇರುವಾಗ 2ನೇ ಹಂತದಲ್ಲಿ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ EOS-3 ಉಪಗ್ರಹವು GSLV-F10 ಬಳಸಿ ಬೆಳಿಗ್ಗೆ ಜಾವ ಸುಮಾರು 5.45ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು. * ಈ EOS-3 ಉಪಗ್ರಹದ ಕ್ರಯೋಜನಿಕ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ವಿಫಲವಾಗಿದೆ ಎಂದಿದ್ದಾರೆ, ಆದರೆ ಈ ಉಪಗ್ರಹವು 2020ರ ಮಾರ್ಚ್ನಲ್ಲಿ ಉಡಾವಣೆಯಾಗಬೇಕಿತ್ತು, ಆ ಸಮಯದಲ್ಲಿಯೂ ಕೂಡ ಕೊನೆಯ ಹಂತದಲ್ಲಿ ತಾಂತ್ರಿಕ ದೋಷದಿಂದ ರದ್ದಾಗಿತ್ತು.