Job Description: * ಒಲಿಂಪಿಕ್ಸ್ನ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿ ಚಿನ್ನ ಪದಕವನ್ನು ಗೆದ್ದುಕೊಟ್ಟ ನೀರಜ್ ಚೋಪ್ರಾ ಅವರು ಇದೀಗ ಪುರುಷರ ಜಾವೆಲಿನ್ ಥ್ರೋ ವಿಶ್ವ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. * ಪ್ರಸ್ತುತ ವಿಶ್ವ ಅಥ್ಲೆಟಿಕ್ಸ್ ರ್ಯಾಂಕಿಂಗ್ಸ್ ಪ್ರಕಾರ ಜರ್ಮನಿಯ ಜೊಹಾನ್ಸ್ ವೆಟರ್ ಅವರು ಸುಮಾರು 1396 ಅಂಕಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ. * ಭಾರತೀಯ ನೀರಜ್ ಚೋಪ್ರಾ ಅವರು ಸುಮಾರು 1315 ಅಂಕಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದಾರೆ. * ಇತ್ತೀಚಿಗೆ ನಡೆದ ಟೋಕಿಯೊ ಒಲಿಂಪಿಕ್ಸ್ನ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಅವರು ಗರಿಷ್ಠ 87.58 ಮೀ. ದೂರ ಜಾವೆಲಿನ್ ಎಸೆದು ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ.