Job Description: * ಪ್ರಸ್ತುತ ಅಮೆರಿಕ- ಭಾರತ ದೇಶಗಳ ನಡುವೆ ಮುಂಗಾರು ಹಾಗೂ ಹವಾಮಾನ ಮುನ್ಸೂಚನೆಯ ಸುಧಾರಣೆಯ ಕಾರಣಗಳಿಂದ ಉಭಯ ದೇಶಗಳ 2 ಸಂಸ್ಥೆಗಳು ಮುಂಗಾರು ದತ್ತಾಂಶವನ್ನು ವಿಶ್ಲೇಷಿಸುವ ಒಪ್ಪಂದಕ್ಕೆ ಪರಸ್ಪರ ಒಪ್ಪಿ ಸಹಿ ಹಾಕಿವೆ. * ಅಮೆರಿಕ- ಭಾರತ ದೇಶಗಳ ನಡುವಿನ ಈ ಒಪ್ಪಂದಕ್ಕೆ ಭಾರತದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಜಿ.ಎ. ರಾಮದಾಸ್ ಹಾಗೂ ಅಮೇರಿಕದ ನ್ಯಾಷನಲ್ ಓಷನಿಕ್ ಅಂಡ್ ಅಟ್ಮಾಸ್ಪೆರಿಕ್ ಅಡ್ಮಿನಿಸ್ಟ್ರೇಷನ್ ನ ಹಂಗಾಮಿ ಮುಖ್ಯ ವಿಜ್ಞಾನಿ ಕ್ರೇಗ್ ಮ್ಯಾಕ್ಲಿಯನ್ ಅವರು ಈ ಸಹಿ ಹಾಕಿದ್ದಾರೆ. * ಈ ಹಿಂದೆ ಅಕ್ಟೋಬರ್ ತಿಂಗಳಿನಲ್ಲಿ ಭಾರತದ ಭೂ ವಿಜ್ಞಾನ ಸಚಿವಾಲಯ ಹಾಗೂ ಎನ್ಒಎಎ ಮಧ್ಯೆ ಆಗಿರುವ ಭೂ ವಿಜ್ಞಾನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರದ ಒಡಂಬಡಿಕೆಯ ಮುಂದಿನ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ ಅಮೇರಿಕದಲ್ಲಿನ ಭಾರತೀಯ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಹಾಗೂ ಅಮೇರಿಕದ ವಾಣಿಜ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಹಾಗೂ ಹಂಗಾಮಿ ಆಡಳಿತಾಧಿಕಾರಿ ಡಾ. ನೇಲ್ ಎ ಜಾಕೋಬ್ಸ್ ಅವರು ಈ ಭೂ ವಿಜ್ಞಾನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರದ ಒಡಂಬಡಿಕೆಗೆ ಸಹಿ ಹಾಕಿದ್ದರು.