Job Description: * ನೌಕಾಪಡೆಯ ಯುದ್ಧ ವೀರ ಕಮಾಂಡರ್ ಗೋಪಾಲ್ ರಾವ್ ಅವರು ತಮ್ಮ 95 ವರ್ಷ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ, ಇವರು 1971 ರ ಯುದ್ಧ ವೀರ ಹಾಗೂ ಭಾರತದ 2 ನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾಗಿರುವ ಮಹಾ ವೀರ ಚಕ್ರ ಪ್ರಶಸ್ತಿಯನ್ನು ಪಡೆದಿದ್ದರು. * ಈ ಹಿಂದೆ 1971 ರ ಡಿಸೆಂಬರ್. 4 ರಂದು ನಡೆದ ಆಪರೇಷನ್ ಟ್ರೈಡೆಂಟ್ ಗನ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದ ಟಾಸ್ಕ್ ಗ್ರೂಪ್ನ INS ಕಿಲ್ತಾನ್ ಹಾಗೂ INS ಕಾಟ್ಚಾಲ್ ನ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ್ದರು, ಇದೀಗ ಈ ಡಿಸೆಂಬರ್. 4 ನ್ನು ನೌಕಾಪಡೆಯ ದಿನವೆಂದು ಆಚರಣೆ ಮಾಡಲಾಗುತ್ತಿದೆ. * ಕಮಾಂಡರ್ ಗೋಪಾಲ್ ರಾವ್ ಅವರು 1926 ರ ನವೆಂಬರ್. 13 ರಂದು ಮಂಗಳೂರಿನಲ್ಲಿ ಜನಿಸಿದರು, ಹಾಗೂ 1950 ರ ಏಪ್ರಿಲ್. 21 ರಂದು ಭಾರತೀಯ ನೌಕಾಪಡೆ ಸೇವೆಗೆ ನಿಯೋಜನೆಗೊಂಡರು.