Job Description: * ಪ್ರಸ್ತುತ ಮಧ್ಯ ಪ್ರದೇಶ ರಾಜ್ಯದ ಬಚಾಗೆ ಗ್ರಾಮವು ದೇಶದ ಮೊದಲ ಸೋಲಾರ್ ಗ್ರಾಮವಾಗಿದೆ, ಈ ಗ್ರಾಮಕ್ಕೆ ಮಧ್ಯಪ್ರದೇಶ ರಾಜ್ಯದ ರಾಜ್ಯಪಾಲ ಮಾಂಗುಭಾಯ್ ಸಿ ಪಟೇಲ್ ಭೇಟಿ ನೀಡಿ ಇಲ್ಲಿರುವಂತಹ ಬುಡಕಟ್ಟು ಕುಟುಂಬ ಜೊತೆ ಸಮಯವನ್ನು ಕಳೆದರು. * ಈ ಗ್ರಾಮದಲ್ಲಿ 74 ಮನೆಗಳಿವೆ ಇಲ್ಲಿರುವ ಪ್ರತಿಯೊಂದು ಮನೆಯೂ ಸೋಲಾರ್ ಫಲಕ, ಬ್ಯಾಟರಿ ಒಲೆಗಳಿವೆ, ಈ ಗ್ರಾಮದಲ್ಲಿನ ಮನೆಯಲ್ಲಿ ಅಡುಗೆ ಮಾಡಲು ಸೌದೆ ಅಥವಾ ಗ್ಯಾಸ್ ಒಲೆಗಳನ್ನು ಬಳಕೆ ಮಾಡುವದಿಲ್ಲ ಎಂದು ತಿಳಿದು ಬಂದಿದೆ. * ಸುಮಾರು '2' ವರ್ಷಗಳ ಹಿಂದೆ IIT-ಬಾಂಬೆ ಹಾಗೂ ಒಎನ್ಜಿಸಿ ಜಂಟಿ ಸಹಯೋಗದಲ್ಲಿ ವಿದ್ಯಾ ಭಾರತಿ ಸಂಸ್ಥೆಯು ಈ ಗ್ರಾಮಕ್ಕೆ ಭೇಟಿ ನೀಡಿ 2017 ರಲ್ಲಿ ಈ ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ಮಾಡಲು ನಿರ್ಧಾರವನ್ನು ಕೈಗೊಂಡಿದ್ದವು, ಇದೀಗ ವಿದ್ಯಾ ಭಾರತಿ ಸಂಸ್ಥೆಯು 2019 ರಲ್ಲಿ ಈ ಗ್ರಾಮವನ್ನು ಸಂಪೂರ್ಣ ಸೋಲಾರ್ ಗ್ರಾಮವನ್ನಾಗಿ ಬದಲಾಯಿಸಿದೆ.