Job Description: * ಪ್ರಸ್ತುತ ಭಾರತ ಸರ್ಕಾರವು ಝೋಯೋಲೋಜಿಕಲ್ ಸರ್ವೇ ಆಫ್ ಇಂಡಿಯಾ (ZSI)ದ ಹೊಸ ನಿರ್ದೇಶಕರಾಗಿ ಡಾ.ಧೃತಿ ಬ್ಯಾನರ್ಜಿಯವರ ನೇಮಕ ಮಾಡಿದೆ. *ಪ್ರಸ್ತುತ ಧೃತಿ ಬ್ಯಾನರ್ಜಿ ಅವರು ಉತ್ತಮ ವಿಜ್ಞಾನಿಯಾಗಿದ್ದಾರೆ, ಇವರು ಪ್ರಾಣಿಶಾಸ್ತ್ರ, ಜೀವಿವರ್ಗೀಕರಣ ಶಾಸ್ತ್ರ, ಹಾಗೂ ರೂಪವಿಜ್ಞಾನದ ಜೊತೆಗೆ ಆಣ್ವಿಕ ವ್ಯವಸ್ಥೆಯಲ್ಲಿ ಸಂಶೋಧನೆ ನಡೆಸುತ್ತಿದ್ದರು. * ಧೃತಿ ಬ್ಯಾನರ್ಜಿ ಅವರು 2012 ರಿಂದ ZSI ನ ಡಿಜಿಟಲ್ ಸೀಕ್ವೆನ್ಸ್ ಮಾಹಿತಿ ಯೋಜನೆಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. * 1916 ರ ಜುಲೈ ನಲ್ಲಿ ಝೋಯೋಲೋಜಿಕಲ್ ಸರ್ವೆ ಆಫ್ ಇಂಡಿಯಾವನ್ನು ಸ್ಥಾಪನೆ ಮಾಡಲಾಗಿದೆ, ಹಾಗೂ ಇದು ತನ್ನ ಪ್ರಧಾನ ಕಛೇರಿಯು ಕೋಲ್ಕತ್ತದಲ್ಲಿ ಹೊಂದಿದೆ. * ZSI ಒಟ್ಟು 16 ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ, ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. * ಈ ಝೋಯೋಲೋಜಿಕಲ್ ಸರ್ವೆ ಆಫ್ ಇಂಡಿಯಾ ಭಾರತದಲ್ಲಿನ ಪ್ರಾಣಿಗಳ ಸಮೀಕ್ಷೆ, ಸಂಶೋಧನೆಯ ಅಧ್ಯಯನ ಮಾಡುತ್ತದೆ. * ಪ್ರಸ್ತುತ 1949 ರಿಂದ ZSI ನಲ್ಲಿ ಮಹಿಳಾ ವಿಜ್ಞಾನಿಗಳ ನೇಮಕ ಮಾಡುವ ಪ್ರಕ್ರಿಯೇ ಆರಂಭವಾಗಿದೆ, ಮೊದಲ ಮಹಿಳಾ ನಿರ್ದೇಶಕಿಯಾಗಿ ಮೀರಾ ಮನ್ಸುಖಾನಿ ಅವರನ್ನು ನೇಮಕ ಮಾಡಲಾಗಿತ್ತು.