Job Description: * ಚೀನಾ ದೇಶವು ಟೋಕಿಯೊ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್ ವಿಭಾಗದ ಚಿನ್ನದ ಪದಕವನ್ನು ಜು ಕ್ಷುಯಿಂಗ್ ಪಡೆದುಕೊಂಡಿದ್ದಾರೆ, ಅಲ್ಲದೇ 2014 ರ ವಿಶ್ವ ಚಾಂಪಿಯನ್ ಲೀ ಲಿಂಗ್ಲಿಂಗ್ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದರು. * ಕೆನಡಾದ ರೋಸಿ ಮೆಕ್ಲೆನಾನ್ ಅವರು 2012 ಮಾತು 2016 ರ ಒಲಿಂಪಿಕ್ಸ್ ಗಳಲ್ಲಿ ಈ ಕ್ರೀಡಾ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು, ಆದರೆ ಈ ಬಾರಿಯ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ. * ಕೆನಡಾದ ರೋಸಿ ಮೆಕ್ಲೆನಾನ್ ಅವರು ಈ ಟೋಕಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. * ಈ ಕ್ರೀಡಾ ವಿಭಾಗದ ಕಂಚಿನ ಪದಕವನ್ನು ಗ್ರೇಟ್ ಬ್ರಿಟನ್ನ ಬ್ರಿಯೊನಿ ಪಾಜ್ ಅವರು ಪಡೆದುಕೊಂಡಿದ್ದಾರೆ, ಈ ಹಿಂದೆ ಇವರು 2016 ರ ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು. * ಚೀನಾ ದೇಶವು ಈ ಬಾರಿಯ ಒಲಿಂಪಿಕ್ಸ್ ನ ಟ್ರ್ಯಾಂಪೊಲಿನ್ ವಿಭಾಗದಲ್ಲಿ ಜಂಟಿ 11 ಪದಕಗಳನ್ನು ಜಯಿಸಿ ದಾಖಲೆಯನ್ನು ನಿರ್ಮಿಸಿದೆ, ಇದೇ ಮೊದಲ ಬಾರಿ ಮಹಿಳೆ ಅಥವಾ ಪುರುಷರ ವಿಭಾಗದಲ್ಲಿ ಇಬ್ಬರು ಕ್ರೀಡಾಪಟುಗಳು 'ಪೋಡಿಯಂ ಫಿನಿಶ್' ಮಾಡಿದ್ದಾರೆ ಎಂದು ತಿಳಿಸಲಾಗಿದೆ.