Job Description: * ಒಡಿಶಾ ತೀರದ ಭುವನೇಶ್ವರದಲ್ಲಿ ಹೊಸ ತಲೆಮಾರಿನ ಮೇಲ್ಮೈಯಿಂದ ಗಾಳಿ ಕ್ಷಿಪಣಿ ಆಕಾಶ್ (AKASH-NG)ನ ಪರೀಕ್ಷಾ ಹಾರಾಟವನ್ನು ಒಡಿಶಾ ಕರಾವಳಿಯ ರಕ್ಷಣಾ ಕೇಂದ್ರದಿಂದ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. * ಪ್ರಸ್ತುತ ಮಾನವರಹಿತ ವೈಮಾನಿಕ ವಾಹನವನ್ನು ಹಾರಿಸಿದ ಕೆಲ ನಿಮಿಷಗಳಲ್ಲಿ, ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿಯನ್ನು ಆಂತರಿಕ ಪರೀಕ್ಷಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಈ ಆಕಾಶ್-ಎನ್ಜಿ ಕ್ಷಿಪಣಿಯು ರೇಡಿಯೊ ಫ್ರೀಕ್ವೆನ್ಸಿ ಅನ್ವೇಷಕ, ಲಾಂಚರ್, ಮಲ್ಟಿ-ಫಂಕ್ಷನ್ ರಾಡಾರ್ ಮತ್ತು ಕಮಾಂಡ್, ಕಂಟ್ರೋಲ್ ಮತ್ತು ಸಂವಹನ ವ್ಯವಸ್ಥೆಯನ್ನು ಹೊಂದಿದೆ. * ಈ ಆಕಾಶ್-ಎನ್ಜಿ ಕ್ಷಿಪಣಿಯು ವ್ಯವಸ್ಥೆಯು ಪತ್ತೆಹಚ್ಚಲು(ಹುಡುಕಲು) ಹಾಗೂ ಬೆಂಕಿಯ ನಿಯಂತ್ರಣಕ್ಕೆ ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ ಮಾಡಿದ ಬಹು ಕಾರ್ಯ ರಾಡಾರ್,ನ್ನು ಹೊಂದಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.