Job Description: * ಕೇರಳ ರಾಜ್ಯದ 'ಹಿರಿಯ ವಿದ್ಯಾರ್ಥಿ' ಎಂಬ ಖ್ಯಾತಿಗೆ ಪಾತ್ರರಾಗಿರುವ ಭಾಗೀರಥಿ ಅಮ್ಮ ವಿಧಿವಶರಾಗಿದ್ದಾರೆ. * ಪ್ರಸ್ತುತ ಭಾಗೀರಥಿ ಅಮ್ಮನವರು ತಮ್ಮ 105 ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಚ್ಚುಗೆಯನ್ನು ಪಡೆದಿದ್ದರು, ಹಾಗೂ "ನಾರಿಶಕ್ತಿ" ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. * ಈ ಹಿಂದೆ 2019 ರಲ್ಲಿ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಶತಾಯುಷಿ ಭಾಗೀರಥಿ ಅಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಡೆಸಿರುವ 4 ನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ 275 ಅಂಕಗಳಿಗೆ 205 ಅಂಕಗಳನ್ನು ಪಡೆದು ಉತ್ತೀರ್ಣರಾಗಿ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ. * ಭಾಗೀರಥಿ ಅಮ್ಮನವರು ಪರಿಸರ, ಗಣಿತ ಮತ್ತು ಮಲಯಾಳಂ ವಿಷಯಗಳ ಪತ್ರಿಕೆಗಳಿಗೆ ಉತ್ತರಿಸಲು 3 ದಿನ ಸಮಯ ತಗೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.